ಹೆಚ್ಚುವರಿ ಅಕ್ಕಿ ಕೊಡದ ಕೇಂದ್ರ ಸರ್ಕಾರದ ವಿರುದ್ಧ ಮಾಜಿ ಸಿಎಂ ಜಗದೀಶ್ ಶೆಟ್ಟರ್ ವಾಗ್ದಾಳಿ.

ಹುಬ್ಬಳ್ಳಿ,ಜೂನ್,24,2023(www.justkannada.in): ರಾಜ್ಯಕ್ಕೆ ಹೆಚ್ಚವರಿ ಅಕ್ಕಿ ನೀಡದ ಕೇಂದ್ರ ಸರ್ಕಾರದ ವಿರುದ್ಧ ಮಾಜಿ ಸಿಎಂ ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದ್ದಾರೆ.

ಹುಬ್ಬಳ್ಳಿಯಲ್ಲಿ ಇಂದು ಮಾತನಾಡಿ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಕೇಂದ್ರ ಸರ್ಕರ ರಾಜ್ಯಕ್ಕೆ ಅಕ್ಕಿ ಕೊಡದೆ ಇರುವುದು ಅಕ್ಷಮ್ಯ ಅಪರಾಧ. ಮೊದಲು ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತೇವೆ ಅಂದಿದ್ದರು. ಇದೀಗ ರಾಜಕೀಯ ಕಾರಣಕ್ಕೆ ಅಕ್ಕಿ ಕೊಡತಿಲ್ಲ. ಕೇಂದ್ರದ ನಾಯಕರು ಅಕ್ಕಿ ಕೊಡಸಲಿ. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಕ್ಕೆ ಸಹಕಾರ ಕೊಡಬೇಕು. ಅಕ್ಕಿ ಕೊಡಲ್ಲ ಅನ್ನೋದು ಒಳ್ಳೆ  ನಡವಳಿಕೆ ಅಲ್ಲ. ಅಕ್ಕಿ ಕೊಟ್ಟರೇ ಕಾಂಗ್ರೆಸ್​ಗೆ ಲಾಭ ಆಗತ್ತೆ ಎಂದು ಬೇರೆ ಬೇರೆ ನೆಪ ಒಡ್ಡತಿದೆ. ಇದ ಅಕ್ಷಮ್ಯ ಅಪರಾಧ  ಎಂದು ಕಿಡಿಕಾರಿದರು.

ಅವಿರೋಧವಾಗಿ ಎಂಎಲ್ ಸಿಯಾಗಿ ಆಯ್ಕೆಯಾಗಿದ್ದಕ್ಕೆ ಖುಷಿಯಾಗಿದೆ. ಮಂತ್ರಿ ಮಾಡೋದು ಕಾಂಗ್ರೆಸ್ ಗೆ ಬಿಟ್ಟಿದ್ದು ರಾಜಕೀಯ ಜೀವನದಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ. ಲೋಕಸಭೆ ಚುನಾವಣೆಯಲ್ಲೂ ನಾನು ಜವಾಬ್ದಾರಿ ವಹಿಸಿಕೊಳ್ಳುತ್ತೇನೆ ಎಂದರು.

ರಾಜ್ಯದಲ್ಲಿ ಬಹಳ  ಶ್ರಮ ಹಾಕಿ ನಾನು ಪಕ್ಷ ಸಂಘಟನೆ ಮಾಡಿ.ದ್ದೆ ಆದರೆ ಬಿಜೆಪಿಯವರು ಅದನ್ನ ಪರಿಗಣಿಸಲಿಲ್ಲ. ರಾಷ್ಟ್ರೀಯ ಪಕ್ಷ ಹೇಗಿರಬೇಕೆಂದು ಕಾಂಗ್ರೆಸ್ ಪಕ್ಷವನ್ನ ನೋಡಿ  ಕಲಿಯಲಿ. ಬಿಜೆಪಿಯವರು ಪೆಟ್ಟು ತಿಂದರೂ ಬದಲಾಗಲಿಲ್ಲ. ಕಾಂಗ್ರೆಸ್  ಲೋಕಸಭೆಯಲ್ಲಿ ಹೆಚ್ಚು ಸ್ಥಾನ ಗೆಲ್ಲುತ್ತೆ ಹೈಕಮಾಂಡ್ ಏನು ಹೇಳುತ್ತೋ ಅದನ್ನ ಪಾಲಿಸುತ್ತೇನೆ ಎಂದು ಜಗದೀಶ್ ಶೆಟ್ಟರ್ ತಿಳಿಸಿದರು.

Key words: Former CM -Jagdish Shettar – central government – not providing – rice.