ಮದುವೆಯ ನಂತರ ಪತ್ನಿಯ ಮನೆಯವರು ನಾನ್ ವೆಜ್ ಪಾರ್ಟಿ ನೀಡಿಲ್ಲವೆಂದು ಪತ್ನಿಯನ್ನು ಹಿಂಸಿಸಿದ ಪತಿ: ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಕರಣ

ಬೆಂಗಳೂರು:ಆ-2:(www.justkannada.in) ಮದುವೆಯ ನಂತರ ಪತ್ನಿಯ ಮನೆಯವರು ನಾನ್ ವೆಜ್ ಪಾರ್ಟಿ ನೀಡಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಪತಿ ಹಾಗೂ ಆತನ ಪೋಷಕರು ಮಹಿಳೆಗೆ ಕಿರುಕುಳ ನೀಡಿ, ಹಿಂಸಿಸುತ್ತಿದ್ದ ಪ್ರಕರಣ ಬೆಳಕಿಗೆಬಂದಿದೆ. ಸಂತ್ರಸ್ತ ಮಹಿಳೆ ಪೊಲ್ಕೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.

ರಾಮಮೂರ್ತಿ ನಗರದ ಜಯಂತಿ ನಗರದ ನಿವಾಸಿ ಸಾಫ್ಟ್ ವೇರ್ ಎಂಜಿನಿಯರ್ ಪತಿಯೊಬ್ಬ ತನ್ನ ಪತ್ನಿಗೆ ಕ್ಷುಲ್ಲಕ ಕಾರಣಕ್ಕಾಗಿ ಹಿಂಸಿಸಿದ್ದಾನೆ. ಅದೂ ಮದುವೆಯ ನಂತರ ಪತ್ನಿಯ ತಂದೆ-ತಾಯಿ ನಾನ್ ವೆಜ್ ಊಟ ಬಡಿಸಿಲ್ಲ ಎಂಬ ಕಾರಣಕ್ಕೆ.

ಇದೇ ನೆಪವೊಡ್ಡಿ ಆಕೆಯ ಪತಿ ಹಾಗೂ ಆತನ ಪೋಷಕರು ಮನಬಂದಂತೆ ಆಕೆಯನ್ನು ಹಿಂಸಿಸಿದ್ದಾರಲ್ಲದೇ, ಆಕೆಯ ತಿಂಗಳ ಸಂಬಳವನ್ನೂ ನೀಡುವಂತೆ ಕಿರುಕುಳ ನೀಡಿದ್ದಾರೆ. ಅಲ್ಲದೇ ಪತಿಯ ತಂದೆ ಆಸ್ತ್ರೋಲೋಜರ್ ಆಗಿದ್ದು, ಎಲ್ಲಾ ತೊಂದೆರೆಗಳಿಗೂ ಈಕೆಯೇ ಕಾರಣ ಎಂದು ಅನಗತ್ಯವಾಗಿ ಆಕೆಯ ಮೇಲೆ ಆರೋಪಮಾಡಿ ಬೈಯ್ಯುತ್ತಿದ್ದರು. ಇದರಿಂದ ಬೇಸತ್ತ ಮಹಿಳೆ ಗಂಡನ ಮನೆತೊರೆದು ತನ್ನ ತವರು ಮನೆ ಸೇರಿದ್ದಾಳೆ. ಈ ಕುರಿತು ಆಕೆ ಪೊಲೀಸ್ ಠಾಣೆಯಲ್ಲಿ ಪತಿ ಹಾಗೂ ಆತನ ಮನೆಯವರ ವಿರುದ್ಧ ದೂರು ನೀಡಿ, ಪ್ರಕರಣ ದಾಖಲಿಸಿದ್ದಾಳೆ.

ಸಂತ್ರಸ್ತ ಮಹಿಳೆ 2018ರಲ್ಲಿ ವಿವಾಹವಾಗಿದ್ದು, ಅಂದಿನಿಂದ ಇಲ್ಲಿಯವರೆಗೂ ಆಕೆಗೆ ಇದೇ ನೆಪವೊಡ್ಡಿ ನಿರಂತರವಾಗಿ ಕಿರುಕುಳನೀಡುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ಅಲ್ಲದೇ ಖಾಲಿ ಪೇಪರ್ ನೀಡಿ ಅದರಲ್ಲಿ ತನಗೆ ಪತಿಯಜತೆ ಇರಲು ಇಷ್ಟವಿಲ್ಲವೆಂದು ಹಾಗೂ ಆತನಿಗೆ ಬೇರೆ ಹುಡುಗಿಯೊಂದಿಗೆ ವಿವಾಹ ಮಾಡಲು ತನಗೆ ಒಪ್ಪಿಗೆಯಿದೆ ಎಂದು ಬರೆದುಕೊಡುವಂತೆ ಒತ್ತಾಯಿಸುತ್ತಿರುವುದಾಗಿ ಮಹಿಳೆ ಉಲ್ಲೇಖಿಸಿದ್ದಾರೆ.

ಮಹಿಳೆ ನೀಡಿದ ದೂರಿನ ಹಿನ್ನಲೆಯಲ್ಲಿ ರಾಮಮೂರ್ತಿನಗರ ಪೊಲೀಸರು ಆಕೆಯ ಪತಿ ಹಾಗೂ ಆತನ ಪೋಷಕರ ವಿರುದ್ಧ ಐಪಿಸಿ ಸೆಕ್ಷನ್ 498 ಎ ಹಾಗೂ 504ರ ಅಡಿಯಲ್ಲಿ ಪ್ರಕರನ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಮದುವೆಯ ನಂತರ ಪತ್ನಿಯ ಮನೆಯವರು ನಾನ್ ವೆಜ್ ಪಾರ್ಟಿ ನೀಡಿಲ್ಲವೆಂದು ಪತ್ನಿಯನ್ನು ಹಿಂಸಿಸಿದ ಪತಿ: ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಕರಣ
Trouble in marital life over not throwing a non-vegetarian party