ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್​-ಬಿಜೆಪಿ ​​ಮೈತ್ರಿ ಬಗ್ಗೆ ಒಪ್ಪಿಕೊಂಡ ಮಾಜಿ ಸಿಎಂ  ಬಿಎಸ್​ ಯಡಿಯೂರಪ್ಪ.

ಬೆಂಗಳೂರು,ಸೆಪ್ಟಂಬರ್,8,2023(www.justkannada.in):  ಲೋಕಸಭೆ ಚುನಾವಣೆಗೆ ಬಿಜೆಪಿ-ಜೆಡಿಎಸ್  ಮೈತ್ರಿ ಕುರಿತು ಸುದ್ದಿ ಹಬ್ಬಿದ ಬೆನ್ನಲ್ಲೆ ಮೈತ್ರಿ ಬಗ್ಗೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಒಪ್ಪಿಕೊಂಡಿದ್ದಾರೆ.

ಈ ಕುರಿತು ಮಾತನಾಡಿದ ಬಿಎಸ್ ಯಡಿಯೂರಪ್ಪ,  ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್​​ ಮೈತ್ರಿ ಬಗ್ಗೆ ಉಭಯ ಪಕ್ಷಗಳ ವರಿಷ್ಠರ ಜೊತೆ ಮಾತುಕತೆ ನಡೆದಿದೆ. ನಮ್ಮ ವರಿಷ್ಠರ ಜೊತೆ ಜೆಡಿಎಸ್ ವರಿಷ್ಠರು ಮಾತನಾಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್​ ಜೊತೆ​​ ಮೈತ್ರಿ ಮಾಡಿಕೊಳ್ಳುತ್ತೇವೆ ಎಂದಿದ್ದಾರೆ.

ಬಿಜೆಪಿ ಜೆಡಿಎಸ್ ಮೈತ್ರಿಗೆ ಅಮಿತ್ ಶಾ ಒಪ್ಪಿದ್ದಾರೆ . ಜೆಡಿಎಸ್ ​ಗೆ ನಾಲ್ಕು ಸ್ಥಾನ ಬಿಟ್ಟುಕೊಡುವ ಬಗ್ಗೆ ಮಾತುಕತೆ ನಡೆದಿದೆ. ಮೈತ್ರಿಯಿಂದ ಲೋಕಸಭಾ ಚುನಾವಣೆಯಲ್ಲಿ ಮತ್ತಷ್ಟು ಶಕ್ತಿ ಬರಲಿದೆ. ಜೆಡಿಎಸ್ ಜೊತೆಗಿನ ಮೈತ್ರಿ ಪಕ್ಷಕ್ಕೆ ಸಹಕಾರಿಯಾಗಲಿದೆ.  ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 26 ಸ್ಥಾನ ಗೆಲ್ಲುವ ವಿಶ್ವಾಸವಿದೆ ಎಂದು ಬಿಎಸ್ ಯಡಿಯೂರಪ್ಪ ಹೇಳಿದರು.

Key words: Former CM- BS Yeddyurappa – JDS-BJP -alliance – Lok Sabha elections.