ಕಾಡಾನೆ ದಾಳಿಗೆ ಅರಣ್ಯ ಸಿಬ್ಬಂದಿ ಬಲಿ.

ಮೈಸೂರು,ಫೆಬ್ರವರಿ,9,2024(www.justkannada.in): ಗಸ್ತಿನಲ್ಲಿದ್ದಾಗ ಆನೆ ದಾಳಿಗೆ ಅರಣ್ಯ ಇಲಾಖೆ ಸಿಬ್ಬಂದಿ ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರು ಜಿಲ್ಲೆ ಸರಗೂರು ತಾಲೂಕಿನ ವ್ಯಾಪ್ತಿಯ ಮಲೆಯೂರು ರೇಂಜ್ ಕಬ್ಬೇಪುರ ಹಾಡಿಯಲ್ಲಿ ಈ ಘಟನೆ ನಡೆದಿದೆ.  ಅರಣ್ಯ ವೀಕ್ಷಕ  ರಾಜು  ಎಂಬುವವರೇ ಆನೆ ದಾಳಿಗೆ ಬಲಿಯಾದವರು. ಮಲೆಯೂರು ವಲಯದಲ್ಲಿ ಗಸ್ತಿನಲ್ಲಿದ್ದಾಗ ಏಕಾಏಕಿ ಕಾಡಾನೆ ದಾಳಿ ನಡೆಸಿದ್ದು ಈ ವೇಳೆ ರಾಜು ಮೃತಪಟ್ಟಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಬಂಡಿಪುರ ಅರಣ್ಯದಲ್ಲಿ ಮತ್ತೊಂದು ಹುಲಿ ಸಾವು.

ಗುಂಡ್ಲುಪೇಟೆ ತಾಲ್ಲೂಕಿನ  ಬಂಡಿಪುರ ಅರಣ್ಯದಲ್ಲಿ ಮತ್ತೊಂದು ಹುಲಿ ಸಾವನ್ನಪ್ಪಿದೆ.  ಕಳೆದ ವಾರ ಮದ್ದೂರು ವಲಯದಲ್ಲಿ ಹುಲಿ ಸಾವಿ‌ನ ಪ್ರಕರಣ ಬೆಳಕಿಗೆ ಬಂದಿತ್ತು. ಈಗ ಯಡಿಯಾಲ ಉಪ ವಿಭಾಗದ ಮೊಳೆಯೂರು ವಲಯದಲ್ಲಿ ಮತ್ತೊಂದು ಹುಲಿ ಸಾವನ್ನಪ್ಪಿದೆ  ಬೇರೆ ಹುಲಿ ಜೊತೆ ಕಾದಾಟದಲ್ಲಿ ಸಾವಾಗಿರಬಹುದು  ಎಂಬ ಶಂಕೆ ವ್ಯಕ್ತವಾಗಿದೆ.

ಸುಮಾರು ಹುಲಿ 1 ರಿಂದ 2 ವರ್ಷದ್ದಾಗಿದ್ದು ಕುಳತ ಸ್ಥಿತಿಯಲ್ಲಿ ಹುಲಿಯ ಕಳೇಬರ ಪತ್ತೆಯಾಗಿದೆ. ಸ್ಥಳಕ್ಕೆ ಸಿಎಫ್  ಡಾ.ರಮೇಶ್ ಕುಮಾರ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು  ಬಳಿಕ ಕಾಡಿನಲ್ಲೇ  ಸಿಬ್ಬಂದಿ ಅಂತ್ಯ ಸಂಸ್ಕಾರ ನಡೆಸಿದ್ದಾರೆ.

Key words: Forest –elephant- attack –death