ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹೆಸರು ಹೇಳಿ ಕೋಟಿ ಕೋಟಿ ವಂಚನೆ: ಪ್ರಕರಣ ದಾಖಲು.

kannada t-shirts

ಬೆಂಗಳೂರು,ಫೆಬ್ರವರಿ,9,2024(www.justkannada.in): ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್  ಅವರ ಹೆಸರು ಹೇಳಿಕೊಂಡು  ಮಹಿಳೆಯೊಬ್ಬಳು ಕೋಟಿ ಕೋಟಿ ಹಣ  ವಂಚನೆ ಮಾಡಿರುವ ಘಟನೆ  ಬೆಂಗಳೂರಿನಲ್ಲಿ ನಡೆದಿದೆ.

 ಬೆಂಗಳೂರು ಹೊರವಲಯದ ಅನೇಕಲ್ ನಲ್ಲಿ ಈ ಘಟನೆ ನಡೆದಿದೆ. ತಮಿಳುನಾಡು ಹೊಸೂರು ಮೂಲದ ಪವಿತ್ರ ಎಂಬಾಕೆ ವಂಚಿಸಿರುವ ಮಹಿಳೆ. ಬ್ಲೂವಿಂಗ್ಸ್ ಹೆಸರಿನಲ್ಲಿ ಟ್ರಸ್ಟ್ ಮಾಡಿ ಜನರಿಗೆ ಮಹಿಳೆ ಯಾಮಾರಿಸಿದ್ದು 17 ಕೋಟಿ ರೂ ಪಂಗನಾಮ ಹಾಕಿದ್ದಾಳೆ ಎನ್ನಲಾಗಿದೆ.

ನಿರ್ಮಲಾ ಸೀತಾರಾಮನ್ ಅವರ ನಕಲಿ ಸಹಿ ಇರುವ ಪತ್ರಗಳನ್ನು ಸೃಷ್ಟಿಸಿ ಸಬ್ಸಿಡಿ ಕೊಡುತ್ತೇನೆ, ಸಾಲ ಕೊಡುತ್ತೇನೆ ಎಂದು ಮೋಸ ಮಾಡಿದ್ದಾಳೆ. ಒಬ್ಬರಿಗೆ 10 ಲಕ್ಷ ಲೋನ್ ನೀಡಿದ್ರೆ 5 ಲಕ್ಷ ಸಬ್ಸಿಡಿ ಎಂದು ಹೇಳಿ, ಹಣ ಡೆಪಾಸಿಟಿ ಮಾಡುವಂತೆ ಯುವತಿ ವಂಚಿಸಿದ್ದಾಳೆ. ಅತ್ತಿಬೆಲೆ, ಧರ್ಮಾಪುರ, ಹೊಸೂರು ಸೇರಿದಂತೆ ಹಲವು ಕಡೆ ಈಕೆ ವಂಚಿಸಿದ್ದಾಳೆ ಎಂದು ತಿಳಿದು ಬಂದಿದ್ದು, ವಂಚಕಿ ಪವಿತ್ರ ಹಾಗೂ ಆಕೆಯ ಜೊತೆಗಾರರಾದ ಪ್ರವೀಣ್, ಯಲ್ಲಪ್ಪ, ಮಮತಾ ಸೇರಿ 14 ಮಂದಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

Key words: Union Minister- Nirmala Sitharaman –Name- Misuse- Fraud-Bangalore

 

website developers in mysore