9 ಕೋಟಿ ರೂ. ಆಸೆಗೆ 65 ಲಕ್ಷ ಹಣ ಕಳೆದುಕೊಂಡ ಮಹಿಳೆ.

ಮೈಸೂರು,ಫೆಬ್ರವರಿ,9,2024(www.justkannada.in): ಮಹಿಳೆಯೊಬ್ಬರು 9 ಕೋಟಿ ರೂ. ಆಸೆಗೆ ಬಿದ್ದು 65 ಲಕ್ಷ ರೂ. ಕಳೆದುಕೊಂಡಿರುವ ಘಟನೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದಿದೆ.

ನಗರದ ಬೋಗಾದಿಯ ನಿವಾಸಿ ಗೀತಾ ನಾಯರ್ (65) ಹಣ ಕಳೆದುಕೊಂಡ ಮಹಿಳೆ. 9,16,98,663/- ಗೂಗಲ್ ಅವಾರ್ಡ್ ಬಂದಿದೆ ಇದನ್ನ ಪಡೆದುಕೊಳ್ಳಲು ಕೆಲವು ಚಾರ್ಜಸ್ ಕಟ್ಟಬೇಕು ಎಂಬ ಮೆಸೇಜ್ ನಂಬಿದ ಗೀತಾ ನಾಯರ್ ಹಂತ ಹಂತವಾಗಿ 65,72,376/- ರೂಗಳನ್ನ ಪಾವತಿಸಿದ್ದಾರೆ.

ಮತ್ತಷ್ಟು ಹಣ ಪಾವತಿಸುವಂತೆ ಹೇಳಿದಾಗ ಅನುಮಾನಗೊಂಡು ಹಣ ಪಾವತಿಸುವುದನ್ನ ಸ್ಥಗಿತಗೊಳಿಸಿದ್ದು,  ಗೀತಾ ನಾಯರ್ ತಾವು ವಂಚನೆಗೆ ಒಳಗಾಗಿರುವುದು ತಿಳಿದು ಪೋಲಿಸ್ ಮೊರೆ ಹೋದರು.  ಈ ಸಂಬಂಧ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೊಸಲು ಮಾರಮ್ಮ ದೇವಸ್ಥಾನದಲ್ಲಿ ಕಳ್ಳತನ.

ಹುಣಸೂರು ತಾಲ್ಲೂಕಿನ ಹೊಸರಾಮನಹಳ್ಳಿ ಸಮೀಪದ  ಹೊಸಲು ಮಾರಮ್ಮ ದೇವಸ್ಥಾನದಲ್ಲಿ ಕಳ್ಳತನವಾಗಿದ್ದು, ಸಿಸಿ ಕ್ಯಾಮರಾದಲ್ಲಿ ಕೃತ್ಯ ಸೆರೆಯಾಗಿದೆ. ಕಳ್ಳರು ಹುಂಡಿಯಲ್ಲಿದ್ದ ಚಿಲ್ಲರೆ, ಬಿಟ್ಟು ನೋಟ್ ಎತ್ತೊಯ್ದಿದ್ದಾರೆ. ದೇವಸ್ಥಾನದ ಬೀಗ ಮುರಿದು ಹುಂಡಿ  ದರೋಡೆ ಮಾಡಿದ್ದು, ದೇವಸ್ಥಾನದ ಪಕ್ಕದ ಜಮೀನಿನಲ್ಲಿ ಚಿಲ್ಲರೆ ಬಿಸಾಡಿ ನೋಟ್ ಸಮೇತ ಎಸ್ಕೇಪ್ ಆಗಿದ್ದಾರೆ.

ಮುಸುಕು ಧರಿಸಿರುವ ಕಳ್ಳರು. ಮೂರು ಹುಂಡಿಗಳನ್ನ ಹೊತ್ತೊಯ್ಯುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.  ಹುಂಡಿಯಲ್ಲಿದ್ದ ಸುಮಾರು 2 ರಿಂದ 3 ಲಕ್ಷ ರೂಪಾಯಿ ಕಳ್ಳರ ಪಾಲಾಗಿದೆ.

ನಿನ್ನೆ ರಾತ್ರಿ ಕೃತ್ಯ ನಡೆದಿದ್ದು, ಇಂದು ಬೆಳಿಗ್ಗೆ ಅರ್ಚಕ ಉಮೇಶ್‌ ಗೆ ಸ್ಥಳೀಯರು ಕಳ್ಳತನದ ಬಗ್ಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಿಳಿಕೆರೆ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಶ್ವಾನದಳ, ಬೆರಳಚ್ಚು ತಜ್ಞರು ಸಹ ಪರಿಶೀಲನೆ ನಡೆಸಿದ್ದು ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: 9 Crore –  woman – lost 65 lakhs -mysore