Sunday, September 13, 2026

BDA Apartments

ಎಪಿಎಂಸಿ ಮಾರುಕಟ್ಟೆ ಶುಲ್ಕ ಶೇಕಡ 0.35ಕ್ಕೆ ನಿಗದಿಗೊಳಿಸಿದ ಸರ್ಕಾರದ ನಿರ್ಧಾರ ...
Home Front Page ಎಪಿಎಂಸಿ ಮಾರುಕಟ್ಟೆ ಶುಲ್ಕ ಶೇಕಡ 0.35ಕ್ಕೆ ನಿಗದಿಗೊಳಿಸಿದ ಸರ್ಕಾರದ ನಿರ್ಧಾರ ಸ್ವಾಗತಿಸಿದ ಎಫ್.ಕೆ.ಸಿ.ಸಿ.ಐ…

ಎಪಿಎಂಸಿ ಮಾರುಕಟ್ಟೆ ಶುಲ್ಕ ಶೇಕಡ 0.35ಕ್ಕೆ ನಿಗದಿಗೊಳಿಸಿದ ಸರ್ಕಾರದ ನಿರ್ಧಾರ ಸ್ವಾಗತಿಸಿದ ಎಫ್.ಕೆ.ಸಿ.ಸಿ.ಐ…

ಬೆಂಗಳೂರು,ಜು,30,2020(www.justkannada.in): ಎಪಿಎಂಸಿ ಮಾರುಕಟ್ಟೆ ಶುಲ್ಕ ಶೇಕಡ 0.35ಕ್ಕೆ ನಿಗದಿಗೊಳಿಸಿದ ಸರ್ಕಾರದ ನಿರ್ಧಾರವನ್ನ ಎಫ್.ಕೆ.ಸಿ.ಸಿ.ಐ. ಮಹಾಸಂಸ್ಥೆ ಸ್ವಾಗತಿಸುತ್ತದೆ ಎಂದು ಎಫ್.ಕೆ.ಸಿ.ಸಿ.ಐ ಅಧ್ಯಕ್ಷರಾದ ಸಿ ಆರ್ ಜನಾರ್ಧನ ತಿಳಿಸಿದರು. jk-logo-justkannada-logo

ಇಂದು ಎಫ್.ಕೆ.ಸಿ.ಸಿ.ಐ. ಅಧ್ಯಕ್ಷ ಸಿ ಆರ್ ಜನಾರ್ಧನರವನ್ನೊಳಗೊಂಡ ನಿಯೋಗವು  ಮುಖ್ಯಮಂತ್ರಿಗ ಬಿ ಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಎಪಿಎಂಸಿ ಮಾರುಕಟ್ಟೆ ಶುಲ್ಕ ಶೇಕಡ 0.35ಕ್ಕೆ ನಿಗದಿಗೊಳಿಸಿದಕ್ಕಾಗಿ ಕರ್ನಾಟಕದಾದ್ಯಂತ ಎಲ್ಲಾ ಎಪಿಎಂಸಿ ವರ್ತಕರ ಪರವಾಗಿ ಸನ್ಮಾನಿಸಲಾಯಿತು.fkcci-welcomes-governments-decision-apmc-market-0-35-per-cent

ರಾಜ್ಯದಲ್ಲಿರುವ ಎಪಿಎಂಸಿ ವರ್ತಕರ ಬಹುವರ್ಷಗಳ ಬೇಡಿಕೆಯಾದ ಎಪಿಎಂಸಿ ಮಾರುಕಟ್ಟೆ ಶುಲ್ಕವನ್ನು ಇಳಿಸಲು ಎಫ್.ಕೆ.ಸಿ.ಸಿ.ಐ. ಮಾಡಿದ್ದ ಮನವಿಯನ್ನು ಸರ್ಕಾರವು ಪುರಸ್ಕರಿಸಿದ್ದು, ಇದರಿಂದ ರೈತರಿಗಷ್ಟೇ ಅಲ್ಲದೇ, ಎಪಿಎಂಸಿ ವರ್ತಕರು ಹಾಗೂ ಎಪಿಎಂಸಿ ಪ್ರಾಂಗಣಗಳಲ್ಲಿ ದುಡಿಯುತ್ತಿರುವ ಕಾರ್ಮಿಕರ ಹಿತದೃಷ್ಠಿಯನ್ನು ಕಾಪಾಡುವಲ್ಲಿ ಈ ನಿರ್ಧಾರ ಸೂಕ್ತವಾಗಿದೆ ಎಂದು  ಸಿ ಆರ್ ಜನಾರ್ಧನ ತಿಳಿಸಿದ್ದಾರೆ.

Key words: FKCCI -welcomes – government’s -decision – APMC -market- 0.35 per cent.