Friday, November 6, 2026

Dasara Wishes

ಕುಡಿಯುವ ನೀರಿಗಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಿ- ಜಿಲ್ಲಾಧಿಕಾರಿಗಳ...
Happy Dasara
Home Front Page ಐದು ವರ್ಷದಲ್ಲಿ ರಾಜ್ಯದಲ್ಲಿ 5 ಸಾವಿರ ಕೋಟಿ ಬಂಡವಾಳ ನಿರೀಕ್ಷೆ : ಬಿ.ಎಸ್.ವೈ

ಐದು ವರ್ಷದಲ್ಲಿ ರಾಜ್ಯದಲ್ಲಿ 5 ಸಾವಿರ ಕೋಟಿ ಬಂಡವಾಳ ನಿರೀಕ್ಷೆ : ಬಿ.ಎಸ್.ವೈ

ಬೆಂಗಳೂರು,ಮಾರ್ಚ್,08,2021(www.justkannada.in)  :  ಜಿಎಸ್ ಟಿ ಸಂಗ್ರಹದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದ್ದು, ಮುಂದಿನ ಐದು ವರ್ಷದಲ್ಲಿ ರಾಜ್ಯದಲ್ಲಿ 5000 ಕೋಟಿ ಬಂಡವಾಳ ನಿರೀಕ್ಷೆಯಿದೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
jkರಾಜ್ಯದಲ್ಲಿ ಮುಂದಿನ ಐದು ವರ್ಷದಲ್ಲಿ 43 ಸಾವಿರ ನೇರ ಉದ್ಯೋಗ ಸೃಷ್ಟಿಯಾಗಲಿದೆ. 60 ಕೋಟಿ ರೂ. ವೆಚ್ಚದಲ್ಲಿ ರಾಜ್ಯದ 19 ಜಿಲ್ಲಾ ಆಸ್ಪತ್ರೆಗಳಲ್ಲಿ 25 ಹಾಸಿಗೆ ಸಾಮರ್ಥ್ಯವುಳ್ಳ ಹಾಗೂ 10 ತಾಲೂಕು ಆಸ್ಪತ್ರೆಗಳಲ್ಲಿ ಆರು ಹಾಸಿಗೆ ಸಾಮರ್ಥ್ಯವುಳ್ಳ ಐಸಿಯು ಸೌಲಭ್ಯ ಕಲ್ಪಿಸಲಾಗುವುದು ಎಂದಿದ್ದಾರೆ.
ಪ್ರತಿ ತಾಲೂಕಿನಲ್ಲೂ 10 ಕಿರು ಉದ್ದಿಮೆ ಆರಂಭ
ಕೋರಮಂಗಲ ರಾಜಕಾಲುವೆ ಅಭಿವೃದ್ದಿಗೆ 169 ಕೋಟಿ ರೂ., ಸಾರಿಗೆ ಇಲಾಖೆಯ 66 ಕಚೇರಿಗಳ ಡಿಜಿಟಲೀಕರಣ, ಅಡಿಕೆ ಪರ್ಯಾಯ ಬೆಳೆ ಪ್ರೋತ್ಸಾಹಕ್ಕೆ 25 ಕೋಟಿ ರೂ., ಹಸಿರೆಲೆ ಗೊಬ್ಬರಕ್ಕೆ 10 ಕೋಟಿ ರೂ., ಪ್ರತಿ ತಾಲೂಕಿನಲ್ಲೂ 10 ಕಿರು ಉದ್ದಿಮೆ ಆರಂಭಿಸುವುದಾಗಿ ಹೇಳಿದರು.
five years-state-5 thousand-crores-Portfolio-Expectation-B.S.Y.
ಬಾದಾಮಿಯಲ್ಲಿ ಜವಳಿ ಪಾರ್ಕ್ ನಿರ್ಮಾಣ. ಶ್ರವಣ ಬೆಳಗೋಳಕ್ಕೆ 50 ಕೋಟಿ ರೂ. ಹಾಗೂ ಯಾಂತ್ರೀಕೃತ ದೋಣಿಗಳಿಗೆ ತೆರಿಗೆ ರಹಿತ ಡೀಸೆಲ್ ಕುರಿತಂತೆ ಬಜೆಟ್ ನಲ್ಲಿ ಪ್ರಸ್ತಾಪಿಸಿದ್ದಾರೆ.
key words : five years-state-5 thousand-crores-Portfolio-Expectation-B.S.Y.