Monday, September 21, 2026

BDA Apartments

ಮೈಸೂರು ಜಿಲ್ಲೆಯ ಐದು ತಾಲೂಕುಗಳಲ್ಲಿ ಮತದಾನ ಆರಂಭ…! BDA JK_Adv BDA Adv
Home Front Page ಮೈಸೂರು ಜಿಲ್ಲೆಯ ಐದು ತಾಲೂಕುಗಳಲ್ಲಿ ಮತದಾನ ಆರಂಭ…!

ಮೈಸೂರು ಜಿಲ್ಲೆಯ ಐದು ತಾಲೂಕುಗಳಲ್ಲಿ ಮತದಾನ ಆರಂಭ…!

ಮೈಸೂರು,ಡಿಸೆಂಬರ್,22,2020(www.justkannada.in) :  ಗ್ರಾಪಂ ಚುನಾವಣೆ ಮೈಸೂರು ಜಿಲ್ಲೆಯ ಐದು ತಾಲೂಕುಗಳಲ್ಲಿ ಮತದಾನ ಆರಂಭವಾಗಿದೆ.

Teachers,solve,problems,Government,bound,Minister,R.Ashok

ಮೊದಲನೇ ಹಂತದಲ್ಲಿ ಹುಣಸೂರು, ಕೆ.ಆರ್.ನಗರ, ಪಿರಿಯಾಪಟ್ಟಣ, ಎಚ್.ಡಿ. ಕೋಟೆ ಮತ್ತು ಸರಗೂರು ತಾಲ್ಲೂಕುಗಳ ಒಟ್ಟು 148 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಯುತ್ತಿದೆ.

ಒಟ್ಟು 949 ಕ್ಷೇತ್ರಗಳಲ್ಲಿ, 2180 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, 125 ಸದಸ್ಯರು ಈಗಾಗಲೇ ಅವಿರೋಧ ಆಯ್ಕೆಯಾಗಿದ್ದಾರೆ.

6 ವಾರ್ಡ್‌ಗಳಿಗೆ ನಾಮಪತ್ರ ಸಲ್ಲಿಕೆ ಆಗಿಲ್ಲ. ಒಟ್ಟು 6,165 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಮತಗಟ್ಟೆ ಅಧಿಕಾರಿ, ಮತದಾನಾಧಿಕಾರಿ ಸೇರಿ ಒಟ್ಟು 5,052 ಸಿಬ್ಬಂದಿಯನ್ನು ಚುನಾವಣಾ ಆಯೋಗ ನೇಮಿಸಿದೆ.

ಮತಗಟ್ಟೆ ಸಿಬ್ಬಂದಿ ಕಳುಹಿಸಲು ಹಾಗೂ ಕರೆತರಲು 176 ಕೆಎಸ್‌ಆರ್‌ಟಿಸಿ ಬಸ್, 17.ಮಿನಿ ಬಸ್, 7 ಜೀಪ್ ಬಳಕೆ ಮಾಡಲಾಗುತ್ತಿದೆ.  ಕೋವಿಡ್ ಹಿನ್ನೆಲೆಯಲ್ಲಿ ಚುನಾವಣೆ ಆಯೋಗ ಸೂಚನೆಯಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.

five-taluks-district-Polling-begins ...!

ಮತಗಟ್ಟೆ ಅಧಿಕಾರಿಗಳು ಹಾಗೂ ಪೋಲಿಂಗ್ ಎಜೆಂಟರು, ಮತಗಟ್ಟೆ ಅಧಿಕಾರಿಗಳು, ಫೇಸ್ ಶೀಲ್ಡ್, ಮಾಸ್ಕ್ ಮತ್ತು ಹ್ಯಾಂಡ್ ಗ್ಲೌಸ್ ಧರಿಸುವುದು ಕಡ್ಡಾಯವಾಗಿದೆ. ಮತದಾರರು ಮತಚಲಾಯಿಸುವ ಸಂದರ್ಭದಲ್ಲಿ ಕಡ್ಡಾಯವಾಗಿ ಫೇಸ್ ಮಾಸ್ಕ್ ಧರಿಸಿರಬೇಕು. ಪ್ರತಿ ಮತಗಟ್ಟೆಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ನೇಮಕ ಮಾಡಲಾಗಿದೆ.

ಮತಗಟ್ಟೆ ಸಿಬ್ಬಂದಿ, ಮತದಾರರಿಗೆ ಕಡ್ಡಾಯವಾಗಿ ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸರ್ ಬಳಕೆ ಮಾಡಲಾಗುತ್ತಿದೆ. ಕೋವಿಡ್ ಲಕ್ಷಣ ಕಂಡು ಬಂದವರಿಗೆ ತಕ್ಷಣ ಆರೋಗ್ಯ ಕೇಂದ್ರಕ್ಕೆ ತಪಾಸಣೆಗೆ ಕಳುಹಿಸಲು ಕ್ರಮ ಕೈಗೊಳ್ಳಲಾಗಿದೆ.

key words : five-taluks-district-Polling-begins …!