ನಟಿ ಶಿಲ್ಪಾ ಶೆಟ್ಟಿಗೆ ಮತ್ತೊಂದು ಕಂಟಕ ! ಲಕ್ನೋದಲ್ಲಿ ಎಫ್’ಐಆರ್

ಬೆಂಗಳೂರು, ಆಗಸ್ಟ್ 11, 2021 (www.justkannada.in): ನಟಿ ಶಿಲ್ಪಾ ಶೆಟ್ಟಿ ಮತ್ತು ಅವರ ತಾಯಿ ಸುನಂದಾ ಶೆಟ್ಟಿ ಅವರಿಗೆ ಮತ್ತೊಂದು ಕಂಟಕ ಎದುರಾಗಿದೆ.

ಶಿಲ್ಪಾ ಶೆಟ್ಟಿ ಹಾಗೂ ಸುನಂದಾ ಶೆಟ್ಟಿ ಅವರನ್ನು ವಂಚನೆ ಪ್ರಕರಣದಲ್ಲಿ ವಿಚಾರಣೆ ನಡೆಸಲು ಉತ್ತರ ಪ್ರದೇಶದ ಲಕ್ನೋ ಪೊಲೀಸರು ಮುಂದಾಗಿದ್ದಾರೆ.

ಶಿಲ್ಪಾ ಶೆಟ್ಟಿ ವೆಲ್ ನೆಸ್ ಸೆಂಟರ್ ರಾಯಭಾರಿಯಾಗಿದ್ದು, ಗ್ರಾಹಕರಿಗೆ ಶಿಲ್ಪಾಶೆಟ್ಟಿಗೆ ಭೋಜನ ಆಮೀಷವೊಡ್ಡಿ ವಂಚಿಸಲಾಗಿದೆ ಎಂದು ಗ್ರಾಹಕರು ದೂರಿದ್ದರು.

ಈ ಸಂಬಂಧ ಲಕ್ನೋ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.