ಚಾಲೆಂಜಿಂಗ್ ಸ್ಟಾರ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಇಂದಿಗೆ 24 ವರ್ಷ

ಬೆಂಗಳೂರು, ಆಗಸ್ಟ್ 11, 2021 (www.justkannada.in): ನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರರಂಗಕ್ಕೆ ಕಾಲಿಟ್ಟು ಇಂದಿಗೆ 24 ವರ್ಷ ಕಳೆದಿದೆ.

ಲೈಟ್ ಬಾಯ್ ಆಗಿ ಚಿತ್ರರಂಗಕ್ಕೆ ಕಾಲಿಟ್ಟ ದರ್ಶನ್ ಪರಿಶ್ರಮದಿಂದ ಬೆಳೆದು ಅಸಂಖ್ಯಾತ ಅಭಿಮಾನಿಗಳನ್ನು ಗಳಿಸಿದ್ದಾರೆ.

ಹಲವು ಏಳು-ಬೀಳುಗಳ ನಡುವೆ ಇಂದು ಅವರು ವೃತ್ತಿ ಜೀವನದ 24 ವರ್ಷ ಪೂರೈಸಿದ್ದಾರೆ. ಈ ಸಂಭ್ರಮವನ್ನು ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಆಚರಿಸುತ್ತಿದ್ದಾರೆ.

ನಿನ್ನೆ ಸಂಜೆ ಸಾಮಾಜಿಕ ಜಾಲತಾನದಲ್ಲಿ ದರ್ಶನ್ ರ ವಿಶೇಷ ಸಿಡಿಪಿ ಕೂಡ ಬಿಡುಗಡೆಯಾಗಿದೆ.