ಬಹುಕಾಲದ ಗೆಳೆಯನೊಂದಿಗೆ ಸಪ್ತಪದಿ ತುಳಿಯಲು ನಟಿ ನಯನತಾರಾ ತಯಾರಿ

ಬೆಂಗಳೂರು, ಆಗಸ್ಟ್ 11, 2021 (www.justkannada.in): ನಟಿ ನಯನತಾರಾ ನಿಶ್ಚಿತಾರ್ಥ ಮಾಡಿಕೊಂಡಿರುವುದಾಗಿ ಪ್ರಕಟಿಸಿದ್ದಾರೆ.

ತಮ್ಮ ಬಹುಕಾಲದ ಗೆಳೆಯ ವಿಘ್ನೇಶ್​ ಶಿವನ್​ ಜೊತೆ ಎಂಗೇಜ್​ಮೆಂಟ್​ ಮಾಡಿಕೊಂಡಿರುವುದಾಗಿ ನಯನತಾರಾ ತಿಳಿಸಿದ್ದಾರೆ.

ಶೀಘ್ರವೇ ಮದುವೆಯಾಗುವುದಾಗಿಯೂ ಈ ಲೇಡಿ ಸೂಪರ್​ ಸ್ಟಾರ್​ ಮಾಹಿತಿ ಹಂಚಿಕೊಂಡಿದ್ದಾರೆ. ಅಂದಹಾಗೆ  ರೌಡಿದಾನ್ ಸಿನಿಮಾ ಸೆಟ್​​ನಲ್ಲಿ ನಯನತಾರಾ ಮತ್ತು ವಿಘ್ನೇಶ್ ಮೊದಲಿಗೆ ಭೇಟಿಯಾಗಿದ್ದರಂತೆ.

ಇತ್ತೀಚೆಗೆ ನಡೆದ ಸಂದರ್ಶನದಲ್ಲಿ ನಯನತಾರಾ ಈ ವಿಷಯಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.