‘ಭಜರಂಗಿ-2’ ಹಿಂದಿ ಡಬ್ಬಿಂಗ್ ರೈಟ್ಸ್ ಭಾರೀ ಮೊತ್ತಕ್ಕೆ ಸೇಲ್

ಬೆಂಗಳೂರು, ಆಗಸ್ಟ್ 11, 2021 (www.justkannada.in): ಹ್ಯಾಟ್ರಿಕ್ ಹೀರೋ ಶಿವಣ್ಣ ನಟನೆಯ ‘ಭಜರಂಗಿ-2’ ಸಿನಿಮಾದ ಹಿಂದಿ ಡಬ್ಬಿಂಗ್ ರೈಟ್ಸ್ ಭರ್ಜರಿ ಮೊತ್ತಕ್ಕೆ ಮಾರಾಟವಾಗಿದೆ.

ಹೌದು.  ಲಾಕ್ ಡೌನ್ ಬಳಿಕ ಬಿಡುಗಡೆ ದಿನಾಂಕ ಘೋಷಣೆ ಮಾಡುವ ಮೂಲಕ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದ ‘ಭಜರಂಗಿ-2’ ತಂಡದಿಂದ ಮತ್ತೊಂದು ಸುದ್ದಿ ಹೊರಬಿದ್ದಿದೆ.

ಎ.ಹರ್ಷ ನಿರ್ದೇಶನದಲ್ಲಿ ಮೂಡಬರುತ್ತಿರುವ ಬಹುನಿರೀಕ್ಷೆಯ ಭಜರಂಗಿ-2 ಸಿನಿಮಾದ ಡಬ್ಬಿಂಗ್ ರೈಟ್ಸ್ ಬರೋಬ್ಬರಿ 5.5 ಕೋಟಿ ರೂ.ಗೆ ಮಾರಾಟವಾಗಿದೆ ಎನ್ನಲಾಗಿದೆ.

ಜಯಣ್ಣ-ಬೋಗೇಂದ್ರ ನಿರ್ಮಾಣದಲ್ಲಿ ಭಜರಂಗಿ-2 ಸಿನಿಮಾ ಮೂಡಿಬಂದಿದೆ. ಭಜರಂಗಿ-2 2013ರಲ್ಲಿ ಬಂದ ಭಜರಂಗಿ ಸಿನಿಮಾದ ಪಾರ್ಟ್-2 ಆಗಿದೆ.