ಸಿದ್ಧರಾಮಯ್ಯ ವಿರುದ್ಧ ವಾಗ್ದಾಳಿ: ಅವಾಚ್ಯ ಶಬ್ದ ಬಳಸಿದ ಬಗ್ಗೆ ಸ್ಪಷ್ಟನೆ ನೀಡಿದ ಸಚಿವ ಕೆ.ಎಸ್ ಈಶ್ವರಪ್ಪ.

ಬೆಳಗಾವಿ,ಆಗಸ್ಟ್,11,2021(www.justkannada.in):  ಕಾಂಗ್ರೆಸ್ ನಾಯಕರ ವಿರುದ್ಧ ತಾವು ಅವಾಚ್ಯ ಶಬ್ದ ಬಳಸಿದ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಕೆ.ಎಸ್ಈಶ್ವರಪ್ಪ ಸ್ಪಷ್ಟನೆ ನೀಡಿದ್ದಾರೆ.

ಕಾಂಗ್ರೆಸ್ ನ ಎಲ್ಲಾ ನಾಯಕರಿಗೆ ಆ ಪದ ಬಳಸಲಿಲ್ಲ. ಆ ಪದ ಬಳಸಿದ್ದು ಬಿಕೆ ಹರಿಪ್ರಸಾದ್ ಗೆ. ಬಳಿಕ ಆ ಬಗ್ಗೆ ಕ್ಷಮೆಯನ್ನೂ ಕೇಳಿದ್ದೇನೆ  ಎಂದು ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ಇಂದು ಮಾತನಾಡಿದ ಸಚಿವ ಕೆ.ಎಸ್  ಈಶ್ವರಪ್ಪ,  ನನಗೂ ಹರಿಪ್ರಸಾದ್ ಗೂ ವೈಯಕ್ತಿಕ ದ್ವೇಷವಿಲ್ಲ. ಾದರೆ ಅವರು ನನ್ನನ್ನ ಜೋಕರ್ ಎಂದರು. ನರೇಂದ್ರ ಮೋದಿ ಹೆಸರು ಸುಲಭ ಶೌಚಾಲಯಕ್ಕೆ ಹೆಸರಿಡಿ ಅಂತಾ ಹೇಳಿದ್ರು. ಹೀಗಾಗಿ ನನಗೆ ಸಿಟ್ಟು ಬಂತು. ಸಿಟ್ಟಿನ ಭರದಲ್ಲಿ ಆ ಹೇಳಿಕೆ ನೀಡಿದೆ. ಸಿಟ್ಟಿನ ಭರದಲ್ಲಿ ಆ ಮಾತು ಮಾತನಾಡಿ ತಕ್ಷಣವೇ ಆ ಪದ ವಾಪಸ್ ಪಡೆದೆ ಎಂದು ಹೇಳಿದರು.

ಇದೇ ವೇಳೆ ಸಿದ್ಧರಾಮಯ್ಯ ವಿರುದ್ದ ಕಿಡಿಕಾರಿದ ಸಚಿವ ಕೆ.ಎಸ್ ಈಶ್ವರಪ್ಪ, ಸಿದ್ಧರಾಮಯ್ಯಗೆ ಕೆಟ್ಟ ಕನಸು ಬೀಳುತ್ತಿದೆ. ಅವರು ಒಳ್ಳೆಯ ಆಡಳಿತ ಕೊಟ್ಟಿದ್ರೆ ಅಧಿಕಾರಕ್ಕೆ ಬರುತ್ತಿದ್ದರು. ಈಗ ಅಧಿಕಾರ ಇಲ್ಲದೇ ವಿಲ ವಿಲ ಅಂತಾ ಒದ್ದಾಡುತ್ತಿದ್ದಾರೆ ಎಂದು ಹರಿಹಾಯ್ದರು.

ಇನ್ನು ಸಚಿವ ಸ್ಥಾನಕ್ಕೆ ಆನಂದ್ ರಾಜೀನಾಮೆ ನೀಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಂಪುಟ ರಚನೆ ವೇಳೆ ಕೆಲವರಿಗೆ ಅಸಮಾಧಾನ ಸಹಜ. ಆನಂದ್ ಸಿಂಗ್ ಜತೆ ಸಿಎಂ, ಹಿರಿಯರು ಚರ್ಚಿಸುತ್ತಾರೆ. ಆನಂದ್ ಸಿಂಗ್ರನ್ನು ಸಮಾಧಾನ ಮಾಡುವ ವಿಶ್ವಾಸವಿದೆ ಎಂದು ಹೇಳಿದರು.

ENGLISH SUMMARY…

War of words against former CM Siddaramaiah: K.S. Eshwarappa clarifies after using abusive language
Belagavi, August 11, 2021 (www.justkannada.in): Minister K.S. Eshwarappa has clarified over his usage of abusive language against Congress leaders.
“I didn’t use those words against all the congress leaders. I used it only against B.K. Hariprasad. I have also apologized for it,” he said.
Speaking about this issue at Belagavi today, he informed that he doesn’t have any personal grudge against Hariprasad. He called me a joker, and he advised me to name toilets in Narendra Modi’s name, which enraged me. In a fit of rage, I have used those words, however, I withdraw my words, he said.
Keywords: Minister K.S. Eshwarappa/ abusive language/ B.K. Hariprasad/ apologize

Key words: Minister- KS Eshwarappa- clarified – use – abused words