ಬಂಧಿತ ಯುವರಾಜ್ ಜತೆ ಹಣಕಾಸು ವ್ಯವಹಾರ ಆರೋಪ: ಸ್ಪಷ್ಟನೆ ನೀಡಿದ ನಟಿ ರಾಧಿಕಾ ಕುಮಾರಸ್ವಾಮಿ…

ಬೆಂಗಳೂರು,ಜನವರಿ,6,2021(www.justkannada.in):  ಕೋಟ್ಯಂತರ ರೂಪಾಯಿ ವಂಚನೆ ಆರೋಪದಡಿ ಬಂಧಿತನಾಗಿರುವ ಆರೋಪಿ ಯುವರಾಜ್ ಜತೆ ಹಣಕಾಸಿನ ವ್ಯವಹಾರ ನಡೆಸಿದ ಆರೋಪ ಕೇಳಿಬಂದ ಹಿನ್ನೆಲೆ ಈ ಬಗ್ಗೆ ನಟಿ ರಾಧಿಕಾ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.jk-logo-justkannada-mysore

ಈ ಕುರಿತು ಇಂದು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ನಟಿ ರಾಧಿಕಾ ಕುಮಾರಸ್ವಾಮಿ, ಯುವರಾಜ್ ನನಗೆ 15 ವರ್ಷದಿಂದ ಪರಿಚಯ. ನಮ್ಮ ತಂದೆ ಕಾಲದಿಂದಲೂ ಪರಿಚಯವಿರುವ ವ್ಯಕ್ತಿ.  ಯುವರಾಜ್​ ನನಗೆ ಒಂದು ಕೋಟಿ ಕೊಟ್ಟಿಲ್ಲ.  15 ಲಕ್ಷ ರೂಪಾಯಿ ಅಡ್ವಾನ್ಸ್ ಹಣ ಮಾತ್ರ ಕೊಟ್ಟಿದ್ದಾರೆ ಎಂದು ತಿಳಿಸಿದರು.

ನಮ್ಮ ತಂದೆ ನಿಧನದ ನಂತರ ನಾವು ದೆಹಲಿಯಲ್ಲಿದ್ದೇವು. ಎಲ್ಲಿಗೂ ಓಡಿ ಹೋಗಿಲ್ಲ. ಯುವರಾಜ್​ದು ವೈಷ್ಣವಿ ಹೆಸರಿನ ಪ್ರೊಡಕ್ಷನ್ ಹೌಸ್ ಇದೆ. ಅದೇ ಬ್ಯಾನರ್​ನಲ್ಲಿ ಐತಿಹಾಸಿಕ ಸಿನೆಮಾ ಮಾಡಲು ನಮಗೆ ಹೇಳಿದ್ದರು. ನಾಟ್ಯ ರಾಣಿ ಶಾಕುಂತಲ ಸಿನಿಮಾ ಮಾಡಲು ನಾನು ಒಪ್ಪಿದ್ದೆ. ಅದೇ ಸಿನೆಮಾ ವಿಚಾರಕ್ಕೆ ಅವರು ನನ್ನ ಖಾತೆಗೆ ಮೊದಲು 15 ಲಕ್ಷ ರೂಪಾಯಿ ಹಾಕಿದ್ದರು. ನಂತರ ಬೇರೆ ನಿರ್ಮಾಪಕರೊಬ್ಬರ ಖಾತೆಯಿಂದ 60 ಲಕ್ಷ ರೂಪಾಯಿ ಹಣ ಬಂದಿದೆ. ಯುವರಾಜ್ ಕೊಟ್ಟಿದ್ದು ಒಂದೂವರೆ ಕೋಟಿ ಅಲ್ಲ, 15 ಲಕ್ಷ ರೂಪಾಯಿ ಅಡ್ವಾನ್ಸ್ ಹಣ ಮಾತ್ರ ಕೊಟ್ಟಿದ್ದಾರೆ ಎಂದು  ರಾಧಿಕಾ ಕುಮಾರಸ್ವಾಮಿ ಅವರು ಸ್ಪಷ್ಟನೆ ನೀಡಿದರು.

ಯುವರಾಜ್​ ಅವರು ಈ ಹಿಂದೆ ಪೂಜೆ ಮಾಡಿಸೋಕೆ ಹೇಳಿದ್ದರು. ಆಗ ನಾವೆಲ್ಲಾ ದೆಹಲಿಯಲ್ಲಿದ್ದೆವು. ಆಗ ಯುವರಾಜ್ ಕರೆ ಮಾಡಿ ಮಾತನಾಡಿದ್ದರು. ಸಿನಿಮಾ ಮಾಡೋಣ ಅಂದಿದ್ದರು. ಅದಾದ ನಂತರ ನನ್ನ ಅಪ್ಪ ತೀರಿ ಹೋದ ಮೇಲೆ ಕರೆ ಮಾಡಿ ಮೀಟ್​ ಮಾಡುವುದಾಗಿ ಹೇಳಿದ್ದರು. 1 ಕೋಟಿ ಟ್ರಾನ್ಸ್ಫರ್ ಆಗಿದ್ದು ಸುಳ್ಳು. ಅವರಿಂದ ನನಗೆ ಸಿಕ್ಕಿದ್ದು, 15+60 ಒಟ್ಟು 75 ಲಕ್ಷ ಅಷ್ಟೇ ಎಂದು ನಟಿ ರಾಧಿಕಾ ಕುಮಾರಸ್ವಾಮಿ ತಿಳಿಸಿದ್ದಾರೆ.Financing deal -fraudster –Yuvraj-Actress -Radhika Kumaraswamy -clarified.

ಕೋಟ್ಯಂತರ ರೂಪಾಯಿ ವಂಚನೆ ಆರೋಪದಡಿ ಬಂಧಿತನಾಗಿರುವ ಆರೋಪಿ ಯುವರಾಜ್  ಪ್ರಕರಣದಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ ಹೆಸರು ಕೇಳುಬರುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿತ್ತು.

Key words: Financing deal -fraudster –Yuvraj-Actress -Radhika Kumaraswamy -clarified.