‘ಕೆ.ಎಸ್ ಈಶ್ವರಪ್ಪ ಸಿಎಂ ಆಗಲಿ’ ಎಂದು ಜೈಕಾರ ಕೂಗಿದ ಕಾಂಗ್ರೆಸ್ ಶಾಸಕ….

ದಾವಣಗೆರೆ,ಜನವರಿ,6,2021(www.justkannada.in):  ಯಾವುದೇ ಪಕ್ಷದ ಮುಖಂಡರಾಗಲಿ, ಕಾರ್ಯಕರ್ತರಾಗಲಿ, ಶಾಸಕ ಸಚಿವರಾಗಲಿ ತಮ್ಮ ಪಕ್ಷದ ತಮ್ಮ ನಾಯಕ ಸಿಎಂ ಆಗಬೇಕೆಂದು ಬಯಸುವುದು ಸಾಮಾನ್ಯವೇ ಸರಿ. ಆದರೆ ಇಲ್ಲಿ ಕಾಂಗ್ರೆಸ್ ಶಾಸಕರೊಬ್ಬರು ಬೇರೆ ಪಕ್ಷದ ಶಾಸಕ ಸಿಎಂ ಆಗಲಿ ಎಂದು ಹೇಳಿಕೆ ನೀಡಿದ್ದಾರೆ.jk-logo-justkannada-mysore

ಹೌದು ಸಚಿವ ಕೆ.ಎಸ್ ಈಶ್ವರಪ್ಪ ಸಿಎಂ ಆಗಲಿ ಎಂದು ಹರಿಹರ ಕಾಂಗ್ರೆಸ್ ಶಾಸಕ ರಾಮಪ್ಪ ಜೈಕಾರ ಹಾಕಿದ್ದಾರೆ.  ಇಂದು ದಾವಣಗೆರೆ ಬೀರಲಿಂಗೇಶ್ವರ ದೇಗುಲ ಆವರಣದಲ್ಲಿ ನಡೆದ ಕುರುಬ ಸಮುದಾಯದ ಎಸ್ ಟಿ ಮೀಸಲಾತಿ ಹೋರಾಟ ಸಮಾವೇಶದಲ್ಲಿ ಈ ಘೋಷಣೆ ಕೂಗಿದ್ದಾರೆ. Congress MLA-Shouting -KS Eshwarappa- will be- CM-Davanagere

ಈ ಕುರಿತು ಮಾತನಾಡಿರುವ ಅವರು, ಐದು ಕುರುಬ ಶಾಸಕರು ಸರ್ಕಾರ ರಚನೆಗೆ ಶ್ರಮಿಸಿದ್ದಾರೆ. ಹೀಗಾಗಿ ಕೆ.ಎಸ್ ಈಶ್ವರಪ್ಪ ಅವರನ್ನ ಸಿಎಂ ಮಾಡಬೇಕು ಎಂದು ಜೈಕಾರ ಕೂಗಿದರು. ಶಾಸಕ ರಾಮಪ್ಪ ಮಾಜಿ ಸಿಎಂ ಸಿದ್ಧರಾಮಯ್ಯ ಅವರ ಆಪ್ತರು ಎನ್ನಲಾಗಿದೆ.

Key words: Congress MLA-Shouting -KS Eshwarappa- will be- CM-Davanagere