Friday, October 2, 2026

BDA Apartments

You should utilize any platform that you get to learn: Nagathihalli Chandrashekar BDA JK_Adv BDA Adv
Home Cinema ಶೂಟಿಂಗ್ ವೇಳೆ ಫೈಟರ್ ಸಾವು ಪ್ರಕರಣ: ಮೂವರು ಆರೋಪಿಗಳು ನ್ಯಾಯಾಂಗ ಬಂಧನಕ್ಕೆ.

ಶೂಟಿಂಗ್ ವೇಳೆ ಫೈಟರ್ ಸಾವು ಪ್ರಕರಣ: ಮೂವರು ಆರೋಪಿಗಳು ನ್ಯಾಯಾಂಗ ಬಂಧನಕ್ಕೆ.

ರಾಮನಗರ,ಆಗಸ್ಟ್,10,2021(www.justkannada.in):  ಶೂಟಿಂಗ್ ವೇಳೆ ವಿದ್ಯುತ್ ತಂತಿ ತಗುಲಿ ಫೈಟರ್ ವಿವೇಕ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ನೀಡಿ ರಾಮನಗರ ಹೆಚ್ಚುವರಿ ಸಿವಿಲ್ ಕೋರ್ಟ್ ಆದೇಶಿಸಿದೆ.

ಆರೋಪಿಗಳಾದ ನಿರ್ದೇಶಕ ಶಂಕರಯ್ಯ, ಫೈಟ್ ಮಾಸ್ಟರ್ ವಿನೋದ್, ಕ್ರೇನ್ ಚಾಲಕ ಮಹದೇವ್ ಮೂವರನ್ನ ಆಗಸ್ಟ್ 24ರವರೆಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ.

ಲವ್ ಯೂ ದಚ್ಚು ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಫೈಟರ್ ವಿವೇಕ್ ವಿದ್ಯುತ್ ತಂತಿ ತಗುಲಿ ಸಾವು ಪ್ರಕರಣ ಸಂಬಂಧ, ಪೊಲೀಸರು ಬಂಧಿಸಿದ್ದ ನಿರ್ದೇಶಕ ಶಂಕರಯ್ಯ, ಫೈಟ್ ಮಾಸ್ಟರ್ ವಿನೋದ್, ಕ್ರೈನ್ ಜಾಲಕ ಮಹಾದೇವ್ ಅವರನ್ನು ರಾಮನಗರದ ಹೆಚ್ಚುವರಿ ಸಿವಿಲ್ ಕೋರ್ಟ್ ನ್ಯಾಯಾಧೀಶರ ಮುಂದೆ ಪೊಲೀಸರು ಹಾಜರು ಪಡಿಸಿದ್ದರು.

Key words: Fighter- death case –shooting-three -accused – judicial custody.