ಮೈಸೂರು ಮೇಯರ್ ಚುನಾವಣೆ ಕುರಿತು ಇನ್ನೆರಡು ದಿನಗಳಲ್ಲಿ ವಿಚಾರಣೆ: ಅಂತಿಮ ತೀರ್ಪು ಸಾಧ್ಯತೆ.

ಮೈಸೂರು,ಆಗಸ್ಟ್,10,2021(www.justkannada.in):  ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆ ನಡೆಸುವ ವಿಚಾರಕ್ಕೆ ಸಂಬಂಧಿಸಿದಂತೆ ಇನ್ನೆರಡು ದಿನಗಳಲ್ಲಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದ್ದು ಅಂತಿಮ ತೀರ್ಪು ಪ್ರಕಟವಾಗುವ ಸಾಧ್ಯತೆ ಇದೆ.

ಮೇಯರ್ ಚುನಾವಣೆ ರದ್ದತಿ ಬಗ್ಗೆ ಪ್ರಶ್ನಿಸಿ ಪಾಲಿಕೆಯ ಕಾಂಗ್ರೆಸ್ ಸದಸ್ಯೆ ಶಾಂತಕುಮಾರಿ ಕೋರ್ಟ್ ಮೊರೆ ಹೋಗಿದ್ದಾರೆ. ಶಾಂತಕುಮಾರಿ ಮೇಯರ್ ಹುದ್ದೆಯ ಪ್ರಬಲ ಆಕಾಂಕ್ಷಿಯಾಗಿದ್ದು, ಮೇಯರ್ ಹುದ್ದೆ ಗಿಟ್ಟಿಸಲು ಕೊನೆಯ ಅಸ್ತ್ರ ಬಳಸಿ ಅವಕಾಶ ಪಡೆಯಲು ಹರಸಾಹಸ ಪಡುತ್ತಿದ್ದಾರೆ.

ಮೇಯರ್ ಚುನಾವಣೆ ಸಂಬಂಧ ನಾಳೆ ಅಥವಾ ನಾಳಿದ್ದು  ಕೋರ್ಟ್ ನಲ್ಲಿ ವಿಚಾರಣೆ ನಡೆಯಲಿದ್ದು ವಿಚಾರಣೆ ಬಳಿಕ ಅಂತಿಮ ತೀರ್ಪು ನೀಡುವ ಸಾಧ್ಯತೆ ಇದೆ. ಹೀಗಾಗಿ ಇತ್ತ ನ್ಯಾಯಾಲಯದ ತೀರ್ಪಿನತ್ತ ಪಾಲಿಕೆಯ ಸದಸ್ಯರ ಚಿತ್ತವಿದೆ.

Key words: Mysore –mayor-election-hearing-court