ಚಾಮುಂಡಿ ಬೆಟ್ಟದಲ್ಲಿ ರೋಪ್ ವೇ ನಿರ್ಮಾಣಕ್ಕೆ ವಿರೋಧಿಸಿ ಪರಿಸರ ಬಳಗದಿಂದ ಹೋರಾಟಕ್ಕೆ ನಿರ್ಧಾರ.

ಮೈಸೂರು,ಮಾರ್ಚ್,15,2022(www.justkannada.in):  ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ನಿರ್ಮಾಣಕ್ಕೆ ಪರಿಸರ ಬಳಗ ವಿರೋಧ ವ್ಯಕ್ತಪಡಿಸಿದ್ದು ಹೋರಾಟಕ್ಕೆ ನಿರ್ಧಾರ ಕೈಗೊಳ್ಳಲಾಗಿದೆ.

ರೋಪ್ ವೇ ವಿರೋಧಿಸಿ ಪರಸರವಾದಿಗಳು ಇಂದು ಮೈಸೂರಿನ ರಾಮಕೃಷ್ಣ ಉದ್ಯಾನವನದಲ್ಲಿ ಸಭೆ ನಡೆಸಿ ಚರ್ಚಿಸಿದರು. ರೋಪ್ ವೇ ಕಾಮಗಾರಿಯಿಂದಾಗುವ ಪರಿಸರ ನಾಶದ ಬಗ್ಗೆ ಕಾರ್ಯಗಾರ, ಹಲವೆಡೆ ಕರಪತ್ರ ಹಂಚಿ ಚಾಮುಂಡಿ ಬೆಟ್ಟದ ರಕ್ಷಣೆಗೆ ಒತ್ತು, ಭಕ್ತಾಧಿಗಳಿಗೂ ರೋಪ್ ವೇ ಬಗ್ಗೆ ಜಾಗೃತಿ ಮೂಡಿಸಲು, ಗ್ರಾಮೀಣ ಭಾಗದಲ್ಲೂ ಚಾಮುಂಡಿ ಬೆಟ್ಟ ಉಳಿಸುವಂತೆ ಅರಿವು ಕಾರ್ಯ ಕೈಗೊಳ್ಳಲು  ನಿರ್ಧಾರ ಕೈಗೊಳ್ಳಲಾಗಿದೆ.

ಬೆಟ್ಟದ ಸುತ್ತಲೂ ಇರುವ ಅರಣ್ಯ ಸಂರಕ್ಷಣೆಗೆ ಮನವಿ, ಬೆಟ್ಟದ ಮೇಲೆ ಯಾವುದೇ ಅಭಿವೃದ್ಧಿ ಹಾಗೂ ಕಟ್ಟಡ ನಿರ್ಮಾಣ ಮಾಡದಂತೆ ಒತ್ತಾಯ ಮಾಡಲು ತೀರ್ಮಾನಿಸಲಾಗಿದೆ. ಸಭೆಯಲ್ಲಿ ಪ್ರೋ.ಕಾಳೇಗೌಡ ನಾಗವಾರ, ಇತಿಹಾಸ ತಜ್ಞ ರಂಗರಾಜು, ಮಾಜಿ ಮೇಯರ್ ಬಿ.ಎಲ್.ಭೈರಪ್ಪ ಸೇರಿ ಇತರ ಸಂಘಸಂಸ್ಥೆಗಳ ಮುಖ್ಯಸ್ಥರು ಭಾಗಿಯಾಗಿದ್ದರು.

ಸಭೆಯಲ್ಲಿ ಮಾತನಾಡಿದ ಮಾಜಿ‌ ಮೇಯರ್ ಬಿ.ಎಲ್.ಭೈರಪ್ಪ, ಚಾಮುಂಡಿ ಬೆಟ್ಟ ಸ್ಥಿತಿಗತಿ ಕಣ್ಣಾರೆ ನೋಡಿದ್ದೇನೆ. ಪ್ರಸಾದ ಯೋಜನೆಯಡಿ 100ಕೋಟಿ ಅನುದಾನ ಬಂದಿದೆ. ಬಜೆಟ್ ನಲ್ಲಿ ರೋಪ್ ವೇ ಅನುದಾನ ನೀಡಿದ್ದಾರೆ. ರೋಪ್ ವೇ ಮಾಡಲು ಬೆಟ್ಟದ ಮಣ್ಣು ಗಟ್ಟಿಯಾಗಿಲ್ಲ. ರೋಪ್ ವೇಗೆ ಹತ್ತು ಕಡೆಯಾದರರೂ 50 ಅಡಿ ಗುಂಡಿ ತೆಗೆಯಬೇಕು. 50 ಅಡಿ ಗುಂಡಿ ತೆಗೆದ್ರೆ ಬೆಟ್ಟದ ಪರಿಸ್ಥಿತಿ ಏನು.

ಈಗಾಗಲೇ ಮಳೆಗಾಲದಲ್ಲಿ ಬೆಟ್ಟ ಸಂಪೂರ್ಣ ಕುಸಿಯುವ ಹಂತಕ್ಕೆ ಬಂದಿದೆ. ಇದೀಗ ಮತ್ತೆ ಅಭಿವೃದ್ಧಿ ಮಾಡಿದ್ರೆ ಬೆಟ್ಟ ಸಂಪೂರ್ಣ ಹಾಳಾಗುತ್ತದೆ. ಬೆಟ್ಟದ ದಾಸೋಹ ಭವನಕ್ಕೆ ಯು.ಜಿ.ಡಿ ಲೈನ್ ಇಲ್ಲ. ಯುಜಿಡಿ ನೀರಿನಿಂದಾಗಿ ಕೂಡ ಬೆಟ್ಟ ಹಾಳಾಗುತ್ತದೆ. ಚಾಮುಂಡಿ ಬೆಟ್ಟದ ಮೇಲೆ ಜನಸಂಖ್ಯೆ ಹೆಚ್ಚಿಸಿ ಓಟ್ ಬ್ಯಾಂಕ್ ಮಾಡಿಕೊಳ್ಳಲು ರಾಜಕಾರಣಿಗಳು ಮುಂದಾಗಿದ್ದಾರೆ. ಈ ಬಗ್ಗೆ ಮಾತನಾಡಿದ್ರೆ ನಮ್ಮನ್ನು ಅಭಿವೃದ್ಧಿ ವಿರೋಧಿಗಳು ಎನ್ನುತ್ತಾರೆ. ಅವರು ಏನೇ ಹೇಳಿದ್ರು ಬೆಟ್ಟ ಉಳಿಸುವ ನಿಟ್ಟಿನಲ್ಲಿ ಹೋರಾಟ ಮಾಡಬೇಕು ಎಂದು ಮಾಜಿ ಮೇಯರ್ ಬಿ.ಎಲ್.ಭೈರಪ್ಪ ಹೇಳಿದರು.

Key words: fight –against- Rope Way -Chamundi Hill