ಮಾ.17 ರಂದು ನಟ ದಿ. ಅಪ್ಪು ಹುಟ್ಟುಹಬ್ಬ: ಮೈಸೂರಿನಲ್ಲಿ 70 ಅಡಿಯ ಕಟೌಟ್ ಗೆ ಹೆಲಿಕಾಪ್ಟರ್ ಮೂಲಕ ಪುಷ್ಪಾರ್ಚನೆಗೆ ಸಿದ್ಧತೆ.

ಮೈಸೂರು,ಮಾರ್ಚ್,15,2022(www.justkannada.in): ಮಾರ್ಚ್.17ರಂದು ನಟ ದಿ. ಪುನೀತ್ ರಾಜಕುಮಾರ್ ಹುಟ್ಟುಹಬ್ಬ ಹಿನ್ನೆಲೆ, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅಪ್ಪು ಅಭಿಮಾನಿಗಳು ಆಕಾಶದೆತ್ತರದ ತಮ್ಮ ಅಭಿಮಾನ ವ್ಯಕ್ತಪಡಿಸಲು ಮುಂದಾಗಿದ್ದಾರೆ.

ಹೌದು ನಟ ಪುನೀತ್ ಅವರ ಹುಟ್ಟುಹಬ್ಬದ ಅಂಗವಾಗಿ ನಗರದ ಜಯಲಕ್ಷ್ಮಿ ಪುರಂನ ಡಿಆರ್ ಸಿ ಮಾಲ್ ಮುಂಭಾಗ ಅದ್ದೂರಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಡೊಳ್ಳು ಕುಣಿತ, ಅನ್ನ ಸಂತರ್ಪಣೆ ಸೇರಿ ನಾನಾ ರೀತಿಯ ಕಾರ್ಯಕ್ರಮಗಳು ನೆರವೇರಲಿದೆ.

ಈ ಮಧ್ಯೆ, 70 ಅಡಿಯ ಪುನೀತ್ ರಾಜ್ ಕುಮಾರ್ ಅವರ ಕಟೌಟ್ ಗೆ ಹೆಲಿಕಾಪ್ಟರ್ ಮೂಲಕ ಪುಷ್ಪಾರ್ಚನೆ ಮಾಡಲು ಸಿದ್ಧತೆ ನಡೆಸಲಾಗಿದೆ. ಹೆಲಿಕಾಪ್ಟರ್ ಮೂಲಕ ಪುಷ್ಪಾರ್ಚನೆಗೆ ಏರ್ ಪೋರ್ಟ್ ಅಧಿಕಾರಿಗಳಿಂದ ಅನುಮತಿ ಪಡೆಯಲಾಗಿದೆ. ನಗರಪೊಲೀಸ್ ಆಯುಕ್ತರು ಅನುಮತಿ ಪಡೆದು ಬೃಹತ್ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.

ಪುನೀತ್ ಅಭಿಮಾನಿಗಳಾದ ಮೈಸೂರಿನ ಎಸ್.ನಾಗೇಂದ್ರ,  ಎಂ.ಕೆ.ವಿವೇಕ್, ಕೆ. ಹರ್ಷಿತ್ , ಲಕ್ಷ್ಮಿಕಾಂತ್, ಎಂ.ಎನ್.ಈಶ್ವರ್  ರಿಂದ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಮಾಡಲಾಯಿತು.

Key words: actor-Punith rajkumar-birthday- mysore