Sunday, September 20, 2026

BDA Apartments

ಮೈಸೂರಿನಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೆಕಳ ಹಾಜಬ್ಬಗೆ ಸನ್ಮಾನ BDA JK_A...
Home Front Page ಮೈಸೂರಿನಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೆಕಳ ಹಾಜಬ್ಬಗೆ ಸನ್ಮಾನ

ಮೈಸೂರಿನಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೆಕಳ ಹಾಜಬ್ಬಗೆ ಸನ್ಮಾನ

ಮೈಸೂರು, ಅಕ್ಟೋಬರ್ 21, 2021 (www.justkannada.in): ರಾಷ್ಟ್ರೊತ್ತಾನ ಸಾಹಿತ್ಯ ಕನ್ನಡ ಪುಸ್ತಕ ಹಬ್ಬದಲ್ಲಿ ಅಕ್ಷರ ಸಂತ ಹರೆಕಳ ಹಾಜಬ್ಬ ಅವರನ್ನು ಸನ್ಮಾನಿಸಲಾಯಿತು.

ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೆಕಳ ಹಾಜಬ್ಬ ಅವರ ಜತೆಗೆ ಜೊತೆಗೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಲಾಯಿತು.

ಈ ವೇಳೆ ಮಾತನಾಡಿದ ಹರೆಕಳ ಹಾಜಬ್ಬ, ನಾನು ಬಹಳ ರುಣಿ ಆಗಿದ್ದೇನೆ. ಬಹಳ ಸಂತೋಷ ಆಗುತ್ತಿದೆ. ಮೈಸೂರು ಪೇಟ ತೊಡಿಸಿ ಗೌರವಿಸಿದ್ದಕ್ಕೆ ತುಂಬಾ ಖುಷಿ ಆಗಿದೆ. ನಮ್ಮೆಲ್ಲರ ಸಹಕಾರ ನನಗೆ ಬೇಕು. ನಿಮ್ಮಲ್ಲೆರ ಪ್ರೀತಿ ಅಭಿಮಾನಕ್ಕೆ ನಾನು ರುಣಿ ಎಂದು ಹೇಳಿದರು.

ನನ್ನಂತ ಬಡವನ್ನು ಗುರುತಿಸುದ್ದು ನಿಮ್ಮೆಲ್ಲರ ಶ್ರೀಮಂತಿಕೆ. ಇದೇ ನನಗೆ ದೊಡ್ಡ ಪ್ರಶಸ್ತಿ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರ ಹರೇಕಳೆ ಹಾಜಪ್ಪ ಹೇಳಿದರು.