Thursday, August 13, 2026

BDA Apartments

Home Front Page ಮೈಸೂರು ವಿವಿ ನಿವೃತ್ತ ಪ್ರಾಧ್ಯಾಪಕಿ ಡಾ.ಎನ್.ಸರಸ್ವತಿ ಅವರಿಗೆ ಅಭಿನಂದನೆ

ಮೈಸೂರು ವಿವಿ ನಿವೃತ್ತ ಪ್ರಾಧ್ಯಾಪಕಿ ಡಾ.ಎನ್.ಸರಸ್ವತಿ ಅವರಿಗೆ ಅಭಿನಂದನೆ

ಮೈಸೂರು, ಜೂನ್ 02, 2019 (www.justkannada.in): ಮೈಸೂರು ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಪ್ರಾಧ್ಯಾಪಕರಾದ ಡಾ.ಎನ್.ಸರಸ್ವತಿ ಅವರು ನಿವೃತ್ತರಾದ ಹಿನ್ನೆಲೆಯಲ್ಲಿ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.

ನಗರದ ಚಾಮುಂಡಿತಪ್ಪಲಿನ ಅಂಗಳದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಿವೃತ್ತರಾದ ಡಾ.ಎನ್.ಸರಸ್ವತಿ ಹಾಗೂ ನಿವೃತ್ತ ಪ್ರೊಫೆಷರ್ ಕೆ.ಎ.ನಾಣಯ್ಯ ದಂಪತಿಯನ್ನು ಮೈಸೂರು ವಿವಿ ಕುಲಪತಿ ಹೇಮಂತ್ ಕುಮಾರ್, ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಸೇರಿದಂತೆ ವಿಭಾಗದಿಂದ ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು.

ಈ ವೇಳೆ ಮಾತನಾಡಿದ ಮೈಸೂರು ವಿವಿ ಕುಲಪತಿ ಹೇಮಂತ್ ಕುಮಾರ್, ಪ್ರತಿ ವರ್ಷ ಉತ್ತಮ ಪ್ರಾಧ್ಯಾಪಕರು ನಿವೃತ್ತರಾದರೆ ಸಾಕಷ್ಟು ಬೇಸರವಾಗುತ್ತದೆ. ಮುಂದೆಯೂ ಇಂತಹ ಪ್ರಾಧ್ಯಾಪಕರು ವಿವಿಗೆ ಬರುವಂತಾಗಲಿದೆ ಎಂದು ಆರೈಸಿದರು. ಹಿರಿಯ ಸಂಶೋಧನಾ ವಿದ್ಯಾರ್ಥಿ ಭಾನುಪ್ರಿಯ, ಉಪನ್ಯಾಸಕಿ ಮಮತಾ, ಸಹಾಯಕ ಪ್ರಾಧ್ಯಾಪಕ ಡಾ.ಅಣ್ಣಯ್ಯ ತೈಲೂರು ಇತರರು ಇದ್ದರು.