ಗಣಪತಿ ಸಚ್ಚಿದಾನಂದ ಸ್ವಾಮೀಜಿಗಳ‌ 77 ಜನ್ಮ ದಿನಾಚರಣೆ: ಮೈಸೂರಿನಲ್ಲಿ ಭವ್ಯ ಮೆರವಣಿಗೆ

0
644

ಮೈಸೂರು, ಜೂನ್ 02, 2019 (www.justkannada.in): ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಗಳ‌ 77 ಜನ್ಮ ದಿನ‌ ಹಿನ್ನೆಲೆಯಲ್ಲಿ ಇಂದು ಮೈಸೂರಿನಲ್ಲಿ ಶ್ರೀಗಳ ಮೆರವಣಿಗೆ ನಡೆಯಿತು.

ವಿಶೇಷ ಪಲಕ್ಕಿಯಲ್ಲಿ ಸಚ್ಚಿದಾನಂದ ಶ್ರೀಗಳ ಮೆರವಣಿಗೆಯಲ್ಲಿ ನೂರಾರು ಭಕ್ತರು ಪಾಲ್ಗೊಂಡಿದ್ದರು. ಪೂರ್ಣಕುಂಭ, ನಗಾರಿ , ಡೊಳ್ಳು ವಾದ್ಯಗಳೊಂದಿಗೆ ಶ್ರೀ ಗಳನ್ನು ಭಕ್ತರು ವೇದಿಕೆಗೆ ಕರೆತಂದರು. ಬಳಿಕ ಸಚ್ಚಿದಾನಂದ ಆಶ್ರಮದ ಆವರಣದಲ್ಲಿ ಶ್ರೀಗಳಿಗೆ ಭವ್ಯ ಪೂರ್ಣಕುಂಭ ಸ್ವಾಗತ ನೀಡಲಾಯಿತು.

ಪೌರಕಾರ್ಮಿಕರಿಂದ ಶ್ರೀಗಳ ಹುಟ್ಟುಹಬ್ಬ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಿವಿಧ ಪೌರಕಾರ್ಮಿಕ ಸಂಘಟನೆಗಳಿಂದ ಶ್ರೀಗಳ ಹುಟ್ಟು ಹಬ್ಬ ಆಚರಿಸಲಾಯಿತು. ಸಚ್ಚಿದಾನಂದ ಶ್ರೀಗಳು. ವಿಶೇಷ ಕೇಕ್ ಕತ್ತರಿಸಿ ಹುಟ್ಟು ಹಬ್ಬ ಆಚರಿಸಿಕೊಂಡರು.