ಮೈಸೂರಿನ ಏಷಿಯನ್‌ ಪೇಂಟ್ಸ್‌ ಕಾರ್ಖಾನೆ ಬಳಿ ರೈತರ ಪ್ರತಿಭಟನೆ ವಿಚಾರ: ಉನ್ನತ ಮಟ್ಟದ ಸಭೆಯಲ್ಲಿ ವಿಸ್ತೃತ ಚರ್ಚೆ….

ಬೆಂಗಳೂರು ,ಜನವರಿ,5,2021(www.justkannada.in):  ಕಾರ್ಖಾನೆಗೆ ಭೂಮಿ ನೀಡಿರುವ ರೈತರ ಮಕ್ಕಳಿಗೆ ಉದ್ಯೋಗ ನೀಡಿ ಎಂದು ಆಗ್ರಹಿಸಿ ಕಳೆದ 42 ದಿನಗಳಿಂದ ಮೈಸೂರಿನ ಏಷಿಯನ್‌  ಪೇಂಟ್ಸ್‌ ಕಾರ್ಖಾನೆ ಬಳಿ ರೈತರು ಪ್ರತಿಭಟನೆ ನಡೆಸುತ್ತಿದ್ದು  ಈ ಸಂಬಂಧ ಪ್ರತಿಭಟನಾ ನಿರತರ ಸಮಸ್ಯೆ ಬಗೆಹರಿಸುವುದಕ್ಕೆ ಉನ್ನತ ಮಟ್ಟದ ಸಭೆ ನಡೆಯಿತು.jk-logo-justkannada-mysore

ಇಂದು ಬೆಂಗಳೂರಿನಲ್ಲಿ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆ  ನಡೆಯಿತು. ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಸಭೆಯಲ್ಲಿ ಏಷಿಯನ್ ಪೇಂಟ್ ಕಾರ್ಖಾನೆಗೆ ಸಂಬಂಧ ಪಟ್ಟ ಸಮಸ್ಯೆಗಳ ಬಗ್ಗೆ ವಿಸ್ತೃತ ಚರ್ಚೆ ನಡೆಸಲಾಯಿತು.

ಮೈಸೂರಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಎಸ್.ಪಿ ಸಿ.ಬಿ ರಿಷ್ಯಂತ್‌ ಅವರಿಂದ ಮಾಹಿತಿ ಸಂಗ್ರಹಿಸಿ ಸಭೆ ನಡೆಸಲಾಯಿತು.  ಸಭೆಯಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್‌ ಗುಪ್ತಾ, ಕೈಗಾರಿಕಾಭಿವೃದ್ದಿ ಆಯುಕ್ತೆ  ಗುಂಜನ್‌ ಕೃಷ್ಣ, ಕೆ.ಐ.ಎ.ಡಿ.ಬಿ ಸಿಇಓ ಡಾ ಶಿವಶಂಕರ್‌, ಕಾರ್ಮಿಕ ಇಲಾಖೆ ಆಯುಕ್ತ  ಅಕ್ರಮ್‌ ಪಾಷಾ ಸೇರಿದಂತೆ ಪ್ರಮುಖ ಅಧಿಕಾರಿಗಳು ಭಾಗಿಯಾಗಿದ್ದರು. ಸಭೆಯಲ್ಲಿ ಏಷಿಯನ್‌ ಪೇಂಟ್ಸ್ ಸಂಸ್ಥೆಯ ಪ್ರಮುಖರ ಉಪಸ್ಥಿತರಿದ್ದರು.

Key words: Farmers- protest – Asian Paints factory – Mysore- discussion – high level meeting.