Saturday, September 12, 2026

BDA Apartments

ಕಾಲು ಜಾರಿ ನಾಲೆಯಲ್ಲಿ ಮುಳುಗಿ ರೈತ ಸಾವು BDA JK_Adv BDA Adv
Home Crime ಕಾಲು ಜಾರಿ ನಾಲೆಯಲ್ಲಿ ಮುಳುಗಿ ರೈತ ಸಾವು

ಕಾಲು ಜಾರಿ ನಾಲೆಯಲ್ಲಿ ಮುಳುಗಿ ರೈತ ಸಾವು

ಮೈಸೂರು,ಆಗಸ್ಟ್,7,2024 (www.justkannada.in): ನಾಲೆಯಲ್ಲಿ ಹಸು ತೊಳೆಯಲು ಹೋಗಿ ಕಾಲು ಜಾರಿ ನಾಲೆಯಲ್ಲಿ ಮುಳುಗಿ ರೈತನೋರ್ವ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆ ಸಾಲಿಗ್ರಾಮ ತಾಲೂಕಿನ ಕರ್ತಾಳು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಪುಟ್ಟೇಗೌಡ (61) ಎಂಬುವರು ಜಮೀನಿನಲ್ಲಿ ಕೆಲಸ ಮುಗಿಸಿ ಕಟ್ಟೆಪುರ ನಾಲೆಯಲ್ಲಿ ಹಸುಗಳನ್ನ ತೊಳೆಯಲು ಹೋದ ವೇಳೆ ಕಾಲು ಜಾರಿ ಬಿದ್ದು ನಾಲೆಯಲ್ಲಿ ಮುಳುಗಿ ಈ ಘಟನೆ ನಡೆದಿದೆ

ಪುಟ್ಟೇಗೌಡ ಮೃತ ದೇಹವನ್ನು‌ ನಾಲೆಯಲ್ಲಿ ಹುಡುಕಾಟ ಮಾಡಿದರೂ  ಪತ್ತೆಯಾಗಿರಲಿಲ್ಲ. ಇಂದು  ಬೆಳಿಗ್ಗೆ 7 ಗಂಟೆಯ ವೇಳೆಗೆ  ಶವಪತ್ತೆಯಾಗಿದ್ದು ಮೃತರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ.

ಮೃತರ ಮರಣೋತ್ತರ ಪರೀಕ್ಷೆಯನ್ನು ಹನಸೋಗೆ‌ ಪ್ರಾಥಮಿಕ ಕೇಂದ್ರದ ವೈದ್ಯರು ನಡೆಸಿ ನಂತರ ಮೃತದೇಹವನ್ನು ವಾರಸುದಾರಿಗೆ ಒಪ್ಪಿಸಲಾಯಿತು.  ಘಟನೆಯ ಕುರಿತು ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Farmer, died, drowning, canal