Tuesday, September 22, 2026

BDA Apartments

ಅಭಿಮಾನಿಗಳ ಸಾವು ಪ್ರಕರಣ: ಇಂದು ಗದಗಕ್ಕೆ ನಟ ಯಶ್ ಭೇಟಿ BDA JK_Adv BDA Adv
Home Cinema ಅಭಿಮಾನಿಗಳ ಸಾವು ಪ್ರಕರಣ: ಇಂದು ಗದಗಕ್ಕೆ ನಟ ಯಶ್ ಭೇಟಿ.

ಅಭಿಮಾನಿಗಳ ಸಾವು ಪ್ರಕರಣ: ಇಂದು ಗದಗಕ್ಕೆ ನಟ ಯಶ್ ಭೇಟಿ.

ಬೆಂಗಳೂರು,ಜನವರಿ,8,2024(www.justkannada.in):ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ  ಕಟೌಟ್ ಹಾಕುವ ವೇಳೆ ವಿದ್ಯುತ್ ತಗುಲಿ ಮೂವರು ಅಭಿಮಾನಿಗಳು ಮೃತಪಟ್ಟ ಪ್ರಕರಣ ಸಂಬಂಧ ಇಂದು ಗ್ರಾಮಕ್ಕೆ ನಟ ರಾಕಿಂಗ್ ಸ್ಟಾರ್ ಯಶ್ ಭೇಟಿ ನೀಡಲಿದ್ದಾರೆ ಎನ್ನಲಾಗುತ್ತಿದೆ.

ನಿನ್ನೆ ತಡರಾತ್ರಿ ನಟ ಯಶ್ ಅವರ ಹುಟ್ಟು ಹಬ್ಬದ ಅಂಗವಾಗಿ ಸುಮಾರು 25 ಅಡಿ ಕಟೌಟ್ ಅನ್ನು  ಹಾಕುವ ವೇಳೆ ವಿದ್ಯುತ್ ಶಾಕ್ ತಗುಲಿ ಹನುಮಂತ್ ಹರಿಜನ್ (21) ಮುರಳಿ ನಡುವಿನಮನಿ (20) ನವೀನ್ (19) ಮೃತಪಟ್ಟಿದ್ದು ಈಗಾಗಲೇ ಅಂತ್ಯಕ್ರಿಯೆ ನೆರವೇರಿದೆ.ಅಭಿಮಾನಿಗಳ ಸಾವು ಪ್ರಕರಣ yash123

ಈ ಮಧ್ಯೆ ನಟ ಯಶ್ ಗ್ರಾಮಕ್ಕೆ ಬರಬೇಕು ಸಾಂತ್ವನ ಹೇಳಬೇಕು ಎಂದು ಆಗ್ರಹ ಕೇಳಿಬಂದಿರುವ ಹಿನ್ನೆಲೆ, ನಟ ಯಶ್ ಇಂದು  ಸಂಜೆ 4:00ಗೆ ಗದಗದ ಸೊರಣಗಿ ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ. ಮೃತರ ಸಂಬಂಧಿಕರಿಗೆ ನಟ ಯಶ್ ಸಾಂತ್ವನ ಹೇಳಲಿದ್ದಾರೆ ಎನ್ನಲಾಗಿದೆ.

Key words: Fans- death- case- Actor –Yash- visits -Gadag -today.