ಖ್ಯಾತ ಟಿವಿ ನಿರೂಪಕಿ ಶವ ಅಡುಗೆ ಮನೆಯಲ್ಲಿ ಪತ್ತೆ

ತಿರುವನಂತಪುರ, ಡಿಸೆಂಬರ್ 25, 2019 (www.justkannada.in): ಖ್ಯಾತ ಟಿವಿ ನಿರೂಪಕಿ ಹಾಗೂ ಸೆಲಬ್ರಿಟಿ ಶೆಫ್ ಜಾಗೀ ಜಾನ್ ಶವ ಮನೆಯಲ್ಲಿ ಪತ್ತೆಯಾಗಿದೆ.

ಕೊರವನಕೋಣಂನಲ್ಲಿರುವ ಮನೆಯಲ್ಲಿ ಜಾಗೀ ಜಾನ್ ತಮ್ಮ ತಾಯಿಯ ಜೊತೆ ವಾಸವಿದ್ದರು. ಇದುವರೆಗೂ ಸಾವಿಗೆ ಕಾರಣ ಏನು ಎಂಬುದು ತಿಳಿದಿಲ್ಲ, ಪೊಲೀಸರು ಅಸ್ವಾಭಾವಿಕ ಸಾವು ಎಂದು ಕೇಸ್ ರಿಜಿಸ್ಟಾರ್ ಮಾಡಿದ್ದಾರೆ.

38 ವರ್ಷದ ಜಾಗೀ ಜಾನ್, ಫ್ಯಾಷನ್, ಮ್ಯೂಸಿಕ್ ಮತ್ತು ಫಿಟ್ ನೆಸ್ ಫೀಲ್ಡ್ ನಲ್ಲಿ ಹೆಸರು ಮಾಡಿದ್ದರು, ಜೊತೆಗೆ ಅಡುಗೆ ಶೋ ನಲ್ಲೂ ಪ್ರಸಿದ್ಧಿ ಪಡೆದಿದ್ದರು. ನಿರೂಪಕಿಯ ಶವ ಅಡುಗೆ ಕೋಣೆಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರ ಹೇಳಿದ್ದಾರೆ.