ಮೈಸೂರಿನಲ್ಲಿ  ಸುರಿದ ಮಳೆಗೆ  ಮನೆಯ ಗೋಡೆ ಕುಸಿತ..

ಮೈಸೂರು,ಅ,22,2019(www.justkannada.in): ಸಾಂಸ್ಕೃತಿಕ ನಗರಿ ಮೈಸೂರಿನಲ್ಲೂ ವರುಣನ ರುದ್ರನರ್ತನ ಜೋರಾಗಿದ್ದು ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಮನೆಯ ಗೋಡೆ ಕುಸಿದಿರುವ ಘಟನೆ ನಡೆದಿದೆ.

ರಾತ್ರಿ ಮೈಸೂರಿನಲ್ಲಿ ಸುರಿದ ಮಳೆಯ ಆವಾಂತರಕ್ಕೆ ಗೋಡೆ ಕುಸಿದಿದ್ದು ಸದ್ಯ ಮನೆಯಲ್ಲಿ ಯಾರು ಇಲ್ಲದ ಕಾರಣ ಅನಾಹುತ  ತಪ್ಪಿದೆ. ನಗರದ ಸುಣ್ಣದಕೇರಿಯಲ್ಲಿ ಈ ಘಟನೆ ನಡೆದಿದೆ.  ಸುಣ್ಣದಕೇರಿ ನಿವಾಸಿ ಶಿವಪ್ರಸಾದ್ ಎಂಬುವರಿಗೆ ಸೇರಿದ ಮನೆ ಬೆಳಗಿನ ಜಾವ ಸುಮಾರು 4.30ರ ವೇಳೆಗೆ  ಕುಸಿದಿದೆ. ಇನ್ನು ಈ ಬಗ್ಗೆ ಪಾಲಿಕೆಗೆ ಗಮಕ್ಕೆ ಬಂದಿದ್ದರೂ ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲ ಎನ್ನಲಾಗಿದೆ.

Key words: Falling -wall – rain – Mysore