ತುಂಗಭದ್ರ ಜಲಾಶಯದಿಂದ ನೀರು ಬಿಡುಗಡೆ: ಹಂಪಿಯ ಪುರಂದರ ಮಂಟಪ ಸೇರಿ ಕೆಲ ಸ್ಮಾರಕಗಳು ಮುಳುಗಡೆ…

ಬಳ್ಳಾರಿ,ಅ,22,2019(www.justkannada.in):  ಕಳೆದ ಮೂರು ದಿನಗಳಿಂದ ರಾಜ್ಯದ ಹಲವು ಕಡೆಗಳಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಜನ ತತ್ತರಿಸಿದ್ದಾರೆ. ಈ ನಡುವೆ ಉತ್ತರ ಕರ್ನಾಟಕದ ಭಾಗದಲ್ಲಿ ಉಕ್ಕಿ ಹರಿಯುತ್ತಿರುವ ನದಿಗಳಿಂದಾಗಿ ಮತ್ತೆ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ.

ಈ ನಡುವೆ ಧಾರಾಕಾರ ಮಳೆ ಹಿನ್ನೆಲೆ ತುಂಗಭದ್ರ ಜಲಾಶಯದಿಂದ ಒಂದುವರೆ ಲಕ್ಷ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದ್ದು, ಹೀಗಾಗಿ ನದಿ ದಂಡೆಯಲ್ಲಿರುವ ಐತಿಹಾಸಿಕ‌ ಹಂಪಿಯ ಪುರಂದರ ಮಂಟಪ ಸೇರಿದಂತೆ ಕೆಲ ಸ್ಮಾರಕಗಳು ಮುಳುಗಡೆಯಾಗಿವೆ. ಜತೆಗೆ ಅಲ್ಲದೆ ಕಂಪ್ಲಿ‌ ಮತ್ತು ಗಂಗಾವತಿ‌ ನಡುವೆ ಸಂಪರ್ಕ ಕಲ್ಪಿಸುವ ಸೇತುವೆ ಸಂಪೂರ್ಣ  ಮುಳುಗಡೆಯಾಗಿದೆ. ಕಂಪ್ಲಿ‌ಪಟ್ಟಣದ ಕೋಟೆ ಪ್ರದೇಶದ ಕರಲ‌ಮನೆಗಳಿಗೆ ನೀರು‌ ನುಗ್ಗಿದೆ.

ಇನ್ನು ಅರಬ್ಬೀ ಸಮುದ್ರದಲ್ಲಿ ಒತ್ತಡ ಸೃಷ್ಟಿಯಾಗಿದ್ದು, ಮುಂದಿನ ಮೂರು ದಿನಗಳಲ್ಲಿ ಭಾರೀ ಗುಡುಗು ಮಿಂಚಿನ ಮಳೆಯಾಗುವ ಸಂಭವವಿದೆ ಎಂದು  ಹವಾಮಾನ‌ ಇಲಾಖೆ ಮುನ್ಸೂಚನೆಯನ್ನು ನೀಡಿದೆ.

Key words: Release – water – Tungabhadra reservoir-Hampi- Purandara mantap- Drowning.