ಹಣ ಬಾಕಿ ಉಳಿಸಿಕೊಂಡು ವಂಚನೆ ಮಾಡಿದ ಆರೋಪ: OYO ಸಂಸ್ಥೆ ಸೌಲಭ್ಯಗಳನ್ನ ಬ್ಯಾನ್ ಮಾಡಲು ಹೋಟೆಲ್ ಮಾಲೀಕರ ಸಂಘದಿಂದ ತೀರ್ಮಾನ….

ಮೈಸೂರು,ಅ,22,2019(www.justkannada.in): ಅಪಾರ ಪ್ರಮಾಣದ ಹಣ ಬಾಕಿ ಉಳಿಸಿಕೊಂಡು ವಂಚನೆ ಮಾಡಿರುವ ಹಿನ್ನಲೆ OYO ಸಂಸ್ಥೆ ಸೌಲಭ್ಯಗಳನ್ನ ಬ್ಯಾನ್ ಮಾಡಲು ಹೋಟೆಲ್ ಮಾಲೀಕರ ಸಂಘ ತೀರ್ಮಾನಿಸಿದೆ.

OYO ಸಂಸ್ಥೆ ವಿರುದ್ದ ವಂಚನೆ ಮಾಡಿದ ಆರೋಪ ಕೇಳಿಬಂದಿದ್ದು  ಮೈಸೂರಿನಲ್ಲಿ OYO ಸಂಸ್ಥೆ ವಿರುದ್ದ ಹೋಟೆಲ್ ಮಾಲಿಕರ ಸಂಘ ತಿರುಗಿ ಬಿದ್ದಿದೆ. ಪ್ರಸ್ತುತ ಮೈಸೂರಿನಲ್ಲಿ 104 ಹೋಟೆಲ್ ಗಳಲ್ಲಿ OYO ಸಂಸ್ಥೆ ಆನ್ ಲೈನ್ ಒಪ್ಪಂದ ಮಾಡಿಕೊಂಡಿದ್ದು, ಈ ನಡುವೆ OYO ಸಂಸ್ಥೆ ರಿವ್ವ್ಯೂ ಹೆಸರಿನಲ್ಲಿ ಹಣ ಕಡಿತ ಮಾಡಿ ಹೋಟೆಲ್ ಮಾಲೀಕರಿಗೆ ವಂಚನೆ ಮಾಡಿದೆ ಎಂಬ ಆರೋಪ ಕೇಳಿ ಬಂದಿದೆ.

OYO ಸಂಸ್ಥೆ  ವಂಚನೆ ಕುರಿತು ಪ್ರತಿಕ್ರಿಯಿಸಿರುವ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ ಗೌಡ, OYO ಸಂಸ್ಥೆ  ಕೇವಲ ಮೈಸೂರು ನಗರದಲ್ಲೇ ಸುಮಾರು 1ಕೋಟಿಗೂ ಅಧಿಕ ಹಣ ಬಾಕಿ ಉಳಿಸಿಕೊಂಡಿದೆ. ರಾಜ್ಯಾದ್ಯಂತ ಸುಮಾರು 100 ಕೋಟಿಗೂ ಅಧಿಕ ಹಣ ಬಾಕಿ ಉಳಿಸಿಕೊಂಡಿದೆ. ಆದರೆ ಆ ಸಂಸ್ಥೆಯ ಸಿಬ್ಬಂದಿ ಕಳೆದ ಒಂದು ವರ್ಷದಿಂದ ಹೋಟಲ್ ಮಾಲೀಕರ ಸಂಪರ್ಕಕ್ಕೆ ಸಿಗುತ್ತಿಲ್ಲ. ಇದರಿಂದಾಗಿ  ಹಣ ಸಿಗದೇ ಹೋಟೆಲ್ ಮಾಲೀಕರು ಗೊಂದಲಕ್ಕೀಡಾಗಿದ್ದಾರೆ. ಈಗಾಗಿ ಮೈಸೂರಿನಲ್ಲಿ OYO ಸಂಸ್ಥೆಯ ಸೌಲಭ್ಯಗಳನ್ನು ಬ್ಯಾನ್ ಮಾಡಲು ಮುಂದಾಗಿದ್ದೇವೆ. ಮೈಸೂರಿನಲ್ಲಿ OYO ವಿರುದ್ದ ಎಫ್ಐಆರ್ ದಾಖಲು ಮಾಡಲಾಗಿದೆ ಎಂದು ತಿಳಿಸಿದರು.

OYO ಸಂಸ್ಥೆಯೂ ಮಧ್ಯಮ ಹೋಟೆಲ್ ಬಡ್ಜೆಟ್ ಹೋಟೆಲ್ ಗಳನ್ನ ಬಾಡಿಗೆ ಪಡೆದು ಕರಾರು ಮಾಡಿಕೊಂಡು ಕಡಿಮೆ ದರ್ಜೆಗೆ ರೂಮ್ ಗಳನ್ನ ನೀಡಿ ಹೋಟೆಲ್ ಮಾಲೀಕರಿಗೆ ವಂಚನೆ ಮಾಡುತ್ತಿದೆ ಎಂದು ಕಿಡಿಕಾರಿದರು.

Key words: mysore-defraudingmoney- Hotel Owners Association -decision – ban -OYO facilities