ಕೊರೋನಾ 3ನೇ ಅಲೆ ಬಗ್ಗೆ ಇಂದು ತಜ್ಞರ ವರದಿ: ಸರ್ಕಾರ ಮಟ್ಟದಲ್ಲಿ ಚರ್ಚಿಸಿ ತೀರ್ಮಾನ-ಗೃಹ ಸಚಿವ ಬಸವರಾಜ ಬೊಮ್ಮಾಯಿ.

ಬೆಂಗಳೂರು,ಜೂನ್,22,2021(www.justkannada.in):  ಕೊರೋನಾ 3ನೇ ಅಲೆ ಬಗ್ಗೆ ಇಂದು ತಜ್ಞರು ವರದಿ ನೀಡಲಿದ್ದಾರೆ. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.jk

ಬೆಂಗಳೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, 3ನೇ ಅಲೆಗೆ ಪೂರ್ವ ತಯಾರಿ ಸಂಬಂಧ ಡಾ.ದೇವಿಶೆಟ್ಟಿ ಸಮಿತಿ ಇಂದು ಮಧ್ಯಾಹ್ನ ವರದಿ ನೀಡಲಿದೆ. ವರದಿ ಬಳಿಕ ಸರ್ಕಾರದ ಮಟ್ಟದಲ್ಲಿ ಈ ಬಗ್ಗೆ ಚರ್ಚೆ ನಡೆಸುತ್ತೇವೆ ಎಂದರು.

ಇನ್ನು ಶಾಲಾ ಕಾಲೇಜು ಆರಂಭದ ಬಗ್ಗೆ ಶಿಕ್ಷಣ ಸಚಿವರೇ ನಿರ್ಣಯ ಕೈಗೊಳ್ಳುತ್ತಾರೆ ಎಂದು ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

Key words: Experts -report -today -Corona -3rd wave- Discussion -Home Minister -Basavaraja Bommai.