ಹೊಲ, ಗದ್ದೆಗಳಲ್ಲಿ ಪ್ರಾಣಿಗಳನ್ನು ಓಡಿಸಲು ವಿನೂತನ ಬೆದರು ಬೊಂಬೆ.

ಬೆಂಗಳೂರು, ಅಕ್ಟೋಬರ್ 26, 2021 (www.justkannada.in): ಅಗತ್ಯವೇ ಎಲ್ಲಾ ಆವಿಷ್ಕಾರಗಳಿಗೆ ಕಾರಣ ಎನ್ನುವ ಮಾತಿದೆ. ಈ ಮಾತು ನಿಜ ಎಂದು ವಿಜ್ಞಾನಿಗಳು ಆಗಾಗ ಸಾಬೀತುಪಡಿಸುತ್ತಿದ್ದಾರೆ. ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯ ಬ್ರಹ್ಮಾವರದಲ್ಲಿರುವ ಪ್ರಾಂತೀಯ ಕೃಷಿ ಹಾಗೂ ತೋಟಗಾರಿಕಾ ಸಂಶೋಧನಾ ಕೇಂದ್ರದ ವಿಜ್ಞಾನಿಗಳು, ಹೊಲ, ಗದ್ದೆಗಳನ್ನು ಪ್ರವೇಶಿಸಿ ಬೆಳೆಯನ್ನು ನಾಪಡಿಸುವ ಪ್ರಾಣಿ, ಪಕ್ಷಿಗಳ ಸಮಸ್ಯೆಯನ್ನು ತಡೆಗಟ್ಟುವ ಉದ್ದೇಶದೊಂದಿಗೆ, 360  ಡಿಗ್ರಿ ತಿರುಗುವಂತಹ ಸ್ವಯಂಚಾಲಿತ ಮಾನವ ರೂಪದ ಬೆದರುಬೊಂಬೆಗಳನ್ನು ಅಭಿವೃದ್ಧಿಪಡಿಸುವ ಮೂಲಕ ತಮ್ಮ ಕ್ರಿಯಾಶೀಲತೆಯನ್ನು ಮೆರೆದಿದ್ದಾರೆ.

ಈ ಬೆದರುಬೊಂಬೆಗಳಿಗೆ ಕತ್ತಿನ ಬಳಿ ಸೆನ್ಸಾರ್‌ಗಳನ್ನು ಅಳವಡಿಸಲಾಗಿದೆ. ಈ ಸೆನ್ಸಾರ್‌ ಗಳು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಯಾವುದಾದರೂ ಅನುಮಾನಾಸ್ಪದ ಚಲನೆ ಕಂಡು ಬಂದರೆ ಅದನ್ನು ಶೀಘ್ರವೇ ಗುರುತಿಸಿ, ಸ್ಪೀಕರ್‌ ಗಳಿಗೆ ಸಂದೇಶ ರವಾನಿಸುತ್ತದೆ. ಆ ಸ್ಪೀಕರ್‌ ಗಳ ಮೂಲಕ ಹುಲಿ, ಸಿಂಹಗಳು ಘರ್ಜಿಸುವ ಶಬ್ದ ಮೊಳಗುತ್ತದೆ. ಇದರಿಂದ ಹೊಲ, ಗದ್ದೆ ತೋಟಗಳಿಗೆ ನುಗ್ಗಿ ಬೆಳೆಯನ್ನು ನಾಶಪಡಿಸುವ ಪ್ರಾಣಿ, ಪಕ್ಷಿಗಳು ಹೆದರಿ ಓಡಿ ಹೋಗಲಿ ಎನ್ನುವುದು ಇದರ ಉದ್ದೇಶವಾಗಿದೆ. ಜೊತೆಗೆ ಈ ಬೆದರುಬೊಂಬೆಗೆ ಒಂದು ಟಾರ್ಚ್ ಅನ್ನೂ ಸಹ ಅಳವಡಿಸಿದ್ದು, ಅದು ಎಲ್ಲಾ ದಿಕ್ಕುಗಳಲ್ಲಿಯೂ ಬೆಳಕನ್ನು ಹರಡುತ್ತಿರುತ್ತದೆ. ಇದರಿಂದಾಗಿ ಪ್ರಾಣಿ, ಪಕ್ಷಿಗಳಿಗೆ ಅದು ಒಂದು ಬೆದರುಬೊಂಬೆಯಂತಲ್ಲದೆ, ಜಮೀನನ್ನು ಕಾಯುತ್ತಿರುವ ನಿಜವಾದ ಮನುಷ್ಯ ಎಂಬ ಭಾವನೆ ಮೂಡುತ್ತದಂತೆ. ಈ ಬೆದರುಬೊಂಬೆ ಸೌರವಿದ್ಯುತ್ ಚಾಲಿತವಾಗಿದ್ದು, ಸುಮಾರು ನಾಲ್ಕು ಸಾವಿರ ಚದರಡಿ ಪ್ರದೇಶದ ಮೇಲೆ ನಿಗಾವಹಿಸುವ ಸಾಮರ್ಥ್ಯ ಹೊಂದಿದೆಯಂತೆ. ಕೇಂದ್ರದ ವಿಜ್ಞಾನಿ ಡಾ. ಶಂಕರ್ ಅವರು ಹೇಳುವಂತೆ, ಇತ್ತೀಚಿನ ದಿನಗಳಲ್ಲಿ ಹೊಲ, ಗದ್ದೆಗಳ ಮೇಲೆ ಪ್ರಾಣಿಗಳ ದಾಳಿ, ಹಾಗೂ ಬೆಳೆ ನಾಶದ ಬಗ್ಗೆ ಹೆಚ್ಚಿನ ಸಂಖ್ಯೆಯ ದೂರುಗಳು ಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಕೈಗೆಟಕುವ ಬೆಲೆಯಲ್ಲಿ ಸೂಕ್ತ ಪರಿಹಾರವನ್ನು ಕಂಡು ಹಿಡಿದಿದ್ದಾರೆ.

ಕೋತಿಗಳನ್ನು ಓಡಿಸಲು ನಕಲಿ ಹುಲಿಗಳು

ರಾಜ್ಯದಾದ್ಯಂತ ಕೋತಿಗಳ ಕಾಟ ಹೆಚ್ಚಾಗಿದ್ದು, ಅನೇಕ ನಿವಾಸಿಗಳು ತಮ್ಮ ಹಾಗೂ ಉತ್ಪನ್ನಗಳನ್ನು ರಕ್ಷಿಸಿಕೊಳ್ಳಲು ನಕಲಿ ಹುಲಿಗಳ ಮೊರೆ ಹೋಗುತ್ತಿದ್ದಾರೆ. ಕೆಲವರು ಕಾಗದದಿಂದ ತಯಾರಿಸಲಾಗಿರುವ ಹುಲಿಗಳನ್ನು ಬಳಸಲು ಆರಂಭಿಸಿದ್ದರೆ, ಇನ್ನೂ ಕೆಲವರು ಹುಲಿ ಆಕಾರದ ಮೃದುಗೊಂಬೆಗಳನ್ನು ಬಳಸುತ್ತಿದ್ದಾರೆ (tiger-shaped stuffed animals).

ಬೆಂಗಳೂರು ಹಾಗೂ ಕೋಲಾರ ಜಿಲ್ಲೆಗಳಲ್ಲಿ ಅನೇಕ ಮನೆಗಳಲ್ಲಿ ಕೋತಿಗಳ ಉಪಟಳ ಹೆಚ್ಚಾಗಿರುವ ಕಾರಣದಿಂದಾಗಿ ಈ ನಕಲಿ ಹುಲಿಗಳನ್ನು ಮನೆಯ ಬಾಲ್ಕನಿಯಲ್ಲಿ ಹಾಗೂ ಟೆರೇಸ್‌ಗಳ ಮೇಲೆ ಪ್ರದರ್ಶಿಸುತ್ತಿದ್ದಾರೆ. ಅಧಿಕಾರಿಗಳ ಪ್ರಕಾರ ಈ ಗೊಂಬೆಗಳು ಕೋತಿಗಳನ್ನು ಓಡಿಸುವಲ್ಲಿ ಯಶಸ್ವಿಯಾಗಿವೆಯಂತೆ.

ಬೆAಗಳೂರು ನಗರದ ಹೊರವಲಯದಲ್ಲಿ ವಾಸಿಸುತ್ತಿರುವ ಶ್ರೀಹರ್ಷ ಎಂಬ ಹೆಸರಿನ ಕಾಲೇಜು ವಿದ್ಯಾರ್ಥಿಯೊಬ್ಬರು ಹೇಳುವಂತೆ: “ಈ ಸ್ಥಳದಲ್ಲಿ ಅನೇಕ ನಿವಾಸಿಗಳು ಹುಲಿಗಳಂತಹ ಹಲವು ಪ್ರಾಣಿಗಳ ಮೃದುಬೊಂಬೆಗಳನ್ನು ಖರೀದಿಸಲಾರಂಭಿಸಿದ್ದಾರೆ. ನಾವು ಈ ಗೊಂಬೆಗಳನ್ನು ಕಾರುಗಳ ಮೇಲೆ, ಟೆರೇಸ್ ಮೇಲೆ ಹಾಗೂ ಜಮೀನುಗಳಲ್ಲಿ ಇಡುತ್ತೇವೆ. ನೀವು ನಂಬುವಿರೋ ಇಲ್ಲವೋ, ಇದು ಯಶಸ್ವಿಯಾಗುತ್ತಿದೆ,” ಎಂದರು.

ಈ ನಡುವೆ, ಮಲೆನಾಡು ಪ್ರದೇಶದಲ್ಲಿ ಕೋತಿಗಳ ಉಪಟಳವನ್ನು ಹೇಗೆ ಬಗೆಹರಿಸುವುದು ಎಂಬು ಕುರಿತು ಒಂದು ಸಭೆಯನ್ನೇ ನಡೆಸಲಾಯಿತಂತೆ. ತಜ್ಞರು ನೀಡಿದ ಹಲವು ಸಲಹೆಗಳ ಪ್ರಕಾರ, ಮೂಡಿಗೆರೆ ತಾಲ್ಲೂಕು ಹಾಗೂ ಸುತ್ತಮುತ್ತಲಿನ ಕೆಲವು ಗ್ರಾಮಸ್ಥರು ತಮ್ಮ ಜಮೀನುಗಳು ಹಾಗೂ ಕೋತಿಗಳ ಉಪಟಳ ಹೆಚ್ಚಾಗಿರುವಂತಹ ಸ್ಥಳಗಳಲ್ಲಿ ಹುಲಿಗಳ ಚಿತ್ರವಿರುವ ಬ್ಯಾನರ್‌ ಗಳನ್ನು ಪ್ರದರ್ಶಿಸಿದ್ದಾರೆ. ಈ ಬ್ಯಾನರ್‌ ಗಳಲ್ಲಿ ಕೋತಿಗಳ ಮೇಲೆ ದಾಳಿ ಮಾಡುತ್ತಿರುವ ಹುಲಿಗಳ ಚಿತ್ರವಿದ್ದು, ಈ ಉಪಾಯ ಆರಂಭಿಕ ಯಶಸ್ಸನ್ನು ನೀಡಿದೆಯಂತೆ. ಸ್ಥಳೀಯ ಕಾಫಿ ಬೆಳೆಗಾರರು ತಿಳಿಸುವಂತೆ ತಮ್ಮ ಕಾಫಿ ಬೆಳೆ ಕೊಯ್ಲಿಗೆ ಬಂದಿದ್ದು, ಕೋತಿಗಳು ಇವರ ಪಾಲಿಗೆ ವಿಲನ್‌ಗಳಾಗಿವೆ. ಕೋತಿಗಳಿಂದಾಗಿ ಇವರ ಬೆಳೆ ನಾಶವಾಗುವ ಭಯ ಅವರಲ್ಲಿ ಮೂಡಿದೆ. ಈ ಹಿಂದೆ ಕಾಡುಗಳಲ್ಲಿ ವಾಸಿಸುತ್ತಿದ್ದಂತಹ ಕೋತಿಗಳು ಇತ್ತೀಚಿನ ದಿನಗಳಲ್ಲಿ ಹೊಲ, ಗದ್ದೆಗಳಗೆ ಸ್ಥಳಾಂತರಗೊಂಡಿವೆ.”

ಆದರೆ, ವಿಜ್ಞಾನಿಗಳು ಹೇಳುವ ಮಾತೇ ಬೇರೆ. “ಈ ರೀತಿ ಮೃದುಬೊಂಬೆಗಳು ಹಾಗೂ ಪೋಸ್ಟರ್‌ ಗಳಿಂದಾಗಿ ಕೋತಿಗಳ ಉಪಟಳಕ್ಕೆ ಪರಿಹಾರ ಸಿಗುವುದು ಬಹಳ ಅಲ್ಪಾವಧಿವಗಷ್ಟೇ. ಇದನ್ನು ಯಾವಾಗಲಾದರೂ ಒಮ್ಮೆ ಉಪಯೋಗಿಸುವಂತೆ ನಾವು ಜನರಿಗೆ ತಿಳಿಸಿದ್ದೇವೆ. ಏಕೆಂದರೆ ಕೋತಿಗಳು ಬಹಳ ಗಮನಿಸುತ್ತವೆ. ಅವುಗಳು ಈ ಪೋಸ್ಟರ್‌ ಗಳನ್ನು ದಿನ ನೋಡುತ್ತಿದ್ದರೆ, ಆರಂಭದಲ್ಲಿ ಅದು ನಿಜವಾದ ಹುಲಿ ಎಂದು ತಿಳಿದು ಓಡಿ ಹೋಗಬಹುದು. ಆದರೆ ದೀರ್ಘಾವಧಿಯಲ್ಲಿ ಈ ಉಪಾಯ ನಡೆಯುವುದಿಲ್ಲ. ಕೋತಿಗಳು ಬಂದು ಈ ಪೋಸ್ಟರ್‌ ಗಳನ್ನು ಮುಟ್ಟಿ ನೋಡಿ ಅರ್ಥಮಾಡಿಕೊಳ್ಳಬಹುದು. ಹಾಗಾಗಿ ಇದರಿಂದ ಅಷ್ಟು ಉಪಯೋಗವಾಗುವುದಿಲ್ಲ,” ಎನ್ನುತ್ತಾರೆ.

ಬೆಂಗಳೂರಿನ ರಾಜೇಶ್ ಎಂಬ ಹೆಸರಿನ ವನ್ಯಜೀವಿ ರಕ್ಷಕರೊಬ್ಬರು ಹೇಳುವಂತೆ: “ಕೋತಿ ಉಪಟಳಕ್ಕೆ ಸಂಬಂಧಪಟ್ಟಂತೆ ನಮಗೆ ಒಂದು ವಾರದಲ್ಲಿ ಮೂರರಿಂದ ಐದು ಕರೆಗಳು ಬರುತ್ತವೆ. ಈ ಐಟಿ ರಾಜಧಾನಿಯಲ್ಲಿ ಕೋತಿಗಳು ಎಲ್ಲೆಂದರಲ್ಲಿ ಕಂಡು ಬರುತ್ತಿವೆ. ಸಾಮಾನ್ಯವಾಗಿ ಇವುಗಳು ಗುಂಪಿನಲ್ಲಿ ಓಡಾಡುತ್ತವೆ, ಒಂದು ಗಂಡು ಕೋತಿ ಅಥವಾ ಹೆಣ್ಣು ಕೋತಿ ಇತರೆ ಕೋತಿಗಳನ್ನು ಮುನ್ನಡೆಸುತ್ತಿರುತ್ತವೆ,” ಎಂದು ವಿವರಿಸಿದರು.

ಸುದ್ದಿ ಮೂಲ: ಬೆಂಗಳೂರ್ ಮಿರರ್

Key words:  exotic -animals – yard – Sweat -puppet-land