Wednesday, August 5, 2026

BDA Apartments

Home Front Page  ಬಿಎಸ್ ವೈ ಕೆಲಸ ಮಾಡುವುದರಲ್ಲಿ ನಂ.1 : ಅವರ ರೈತ ಹೋರಾಟಗಾರ- ಸಿಎಂ ಪರ ಸಚಿವ...

 ಬಿಎಸ್ ವೈ ಕೆಲಸ ಮಾಡುವುದರಲ್ಲಿ ನಂ.1 : ಅವರ ರೈತ ಹೋರಾಟಗಾರ- ಸಿಎಂ ಪರ ಸಚಿವ ಆರ್.ಅಶೋಕ್ ಬ್ಯಾಟಿಂಗ್.

ಬೆಂಗಳೂರು,ಜುಲೈ,25,2021(www.justkannada.in):  ಸಿಎಂ ಬಿಎಸ್ ಯಡಿಯೂರಪ್ಪ ಕೆಲಸ ಮಾಡುವುದರಲ್ಲಿ ನಂಬರ್ ಒನ್. ಅವರು ರೈತ ಹೋರಾಟಗಾರ ಎಂದು ಸಿಎಂ ಬಿಎಸ್ ವೈ ಪರ ಕಂದಾಯ ಸಚಿವ ಆರ್.ಅಶೋಕ್ ಬ್ಯಾಟ್ ಬೀಸಿದ್ದಾರೆ.jk

ಬೆಂಗಳೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಆರ್.ಅಶೋಕ್, ಸಿಎಂ ಬಿಎಸ್ ಯಡಿಯೂರಪ್ಪ ಜನರ ಕಷ್ಟದ ಜತೆ ಬೆಳೆದು ಬಂದವರು. ಹಗಲು ರಾತ್ರಿ ಜನರಿಗಾಗಿ ಕೆಲಸ ಮಾಡುತ್ತಿದ್ದಾರೆ.  ಹೋರಾಟ ಎನ್ನುವುದು ಅವರಿಗೆ ರಕ್ತಗತವಾಗಿ ಬಂದಿದೆ. ಹೀಗಾಗಿ ಅವರನ್ನ ಜನನಾಯಕ ಅಂತಾ ಕರೆಯುತ್ತಾರೆ. ಕಾಯಕವೇ ಕೈಲಾಸ ಎಂದು ಸಿಎಂ ಬಿಎಸ್ ವೈ ಕೆಲಸ ಮಾಡುತ್ತಿದ್ದಾರೆ ಎಂದು ಗುಣಗಾನ ಮಾಡಿದರು.

ಸಿಎಂ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ಆರ್.ಅಶೋಕ್, ಹೈಕಮಾಂಡ್  ಸಂದೇಶದ ಬಗ್ಗೆ ಗೊತ್ತಿಲ್ಲ ಅದನ್ನ ಸಿಎಂ ಅವರನ್ನೇ ಕೇಳಬೇಕು ಎಂದು ಸಚಿವ ಆರ್.ಅಶೋಕ್ ತಿಳಿಸಿದರು.

Key words:  CM- BS yeddyrappa- working -No. 1-.minister-R. Ashok,