ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ:  ಗಾಂಜಾ ಹಾಗೂ ಇಬ್ಬರು ವಶಕ್ಕೆ.

ಯಾದಗಿರಿ,ನವೆಂಬರ್,24,2022(www.justkannada.in):  ಶಹಾಪುರ ಹಾಗೂ ಸುರಪುರ ವಿಭಾಗದ ಅಬಕಾರಿ ಇಲಾಖೆ ಅಧಿಕಾರಿಗಳು ಏಕಕಾಲಕ್ಕೆ 4 ಕಡೆ ದಾಳಿ ನಡೆಸಿ  ಗಾಂಜಾ ಬೆಳೆದಿದ್ದ ಇಬ್ಬರನ್ನ ವಶಕ್ಕೆ ಪಡೆದಿದ್ದಾರೆ.

ವಿವಿಧ ಕಡೆ ಗಾಂಜಾ ಬೆಳೆದ ಜಮೀನುಗಳ ಮೇಲೆ  ಇಂದು ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು ಯಾದಗಿರಿ ಜಿಲ್ಲೆ ವಡಗೇರ ತಾಲೂಕಿನ ಉಳ್ಳೇಸುಗುರದಲ್ಲಿ 3 ಕಡೆ, ಸುರಪುರ ತಾಲೂಕಿನ ಏವೂರು ಗ್ರಾಮದಲ್ಲಿ ಒಂದು ಕಡೆ ದಾಳಿ ನಡೆಸಿದ್ದಾರೆ.

ಈ ವೇಳೆ 3 ಕೆಜಿ ಒಣ ಗಾಂಜಾ, 3 ಕೆಜಿ ಹಸಿ ಗಾಂಜಾ ಜಪ್ತಿ  ಮಾಡಿ ಇಬ್ಬರನ್ನ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

Key words: Excise -Department- officer- raid- Marijuana -seized.