ನಟ ಕಮಲ್ ಹಾಸನ್ ಆಸ್ಪತ್ರೆಗೆ ದಾಖಲು.

ಚೆನ್ನೈ,ನವೆಂಬರ್,24,2022(www.justkannada.in): ಬಹುಭಾಷಾ ನಟ ಕಮಲ್ ಹಾಸನ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಜ್ವರದಿಂದ ಬಳಲುತ್ತಿರುವ ನಟ ಕಮಲ್ ಹಾಸನ್ ಚೆನ್ನೈನ ಶ್ರೀರಾಮಚಂದ್ರ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ.  ತಜ್ಞ ವೈದ್ಯರಿಂದ ಕಮಲ ಹಾಸನ್​​ಗೆ ಟ್ರೀಟ್ ​ಮೆಂಟ್​ ಪಡೆದುಕೊಳ್ಳುತ್ತಿದ್ಧಾರೆ. ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ದಿಡೀರ್​ ಆಸ್ಪತ್ರೆಗೆ ದಾಖಲಾಗಿದ್ಧಾರೆ.

ನಾರ್ಮಲ್​​​ ಚೆಕಪ್​​ಗಾಗಿ ದಾಖಲಾಗಿದ್ದಾರೆ ಎಂದು ಕುಟುಂಬದ ಮಾಹಿತಿ ನೀಡಿದ್ದು, ಈ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನದ ವೇಳೆಗೆ ನಟ ಕಮಲ್ ಹಾಸನ್ ಡಿಸ್ಚಾರ್ಜ್​ ಆಗುವ ಸಾಧ್ಯತೆಯಿದೆ. ಮೂರ್ನಾಲ್ಕು ದಿನ ವಿಶ್ರಾಂತಿ ಪಡೆಯಲು ವೈದ್ಯರ ಸೂಚನೆ ನೀಡಿದ್ಧಾರೆ.

Key words: Actor- Kamal Haasan- admitted – hospital.