Saturday, September 12, 2026

BDA Apartments

ಹಲ್ಲೆ ಪ್ರಕರಣ: ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ್ ಸಹೋದರ ಬಂಧನ BDA JK_Adv BDA Adv
Home Crime ಹಲ್ಲೆ ಪ್ರಕರಣ: ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ್ ಸಹೋದರ ಬಂಧನ

ಹಲ್ಲೆ ಪ್ರಕರಣ: ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ್ ಸಹೋದರ ಬಂಧನ

ಬೆಂಗಳೂರು, ಜುಲೈ 04, 2021 (www.justkannada.in): ಮಾಜಿ ಸಚಿವ ಹಾಗೂ ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ್ ಅವರ ಸಹೋದರ ಶಿವಾಜಿ ನಾಯ್ಕ ಅವರನ್ನು ದಾವಣಗೆರೆ ಜಿಲ್ಲೆ ಪೊಲೀಸರು ಬಂಧಿಸಿದ್ದಾರೆ.

ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಾಜಿ ನಾಯ್ಕ, ಅವರ ಪತ್ನಿ ಮತ್ತು ಪುತ್ರನನ್ನು ಬಂಧಿಸಲಾಗಿದೆ.

ನಿವೇಶನ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬದವರ ನಡುವೆ ಗಲಾಟೆ ನಡೆದು ಹಲ್ಲೆ ಮಾಡಲಾಗಿದ್ದು, ದೂರು-ಪ್ರತಿದೂರು ದಾಖಲಾದ ಹಿನ್ನೆಲೆಯಲ್ಲಿ ಎರಡೂ ಕಡೆಯವರನ್ನು ಬಂಧಿಸಲಾಗಿದೆ.

ನಿವೇಶನ ವಿಚಾರಕ್ಕೆ ಸಂಬಂಧಿಸಿದಂತೆ ಜಗಳ ನಡೆದಿದ್ದು, ಗಲಾಟೆ ವಿಕೋಪಕ್ಕೆ ತಿರುಗಿದ ವೇಳೆ ಹಲ್ಲೆ ಮಾಡಲಾಗಿದೆ ಎಂದು ಹೇಳಲಾಗಿದೆ.