Saturday, August 22, 2026

BDA Apartments

Home Front Page ದಲಿತ ಸಿಎಂ ಚರ್ಚೆ ಮುನ್ನಲೆಗೆ ಬರಲು ನಾನೇ ಕಾರಣ ಎಂದ ಡಾ.ಜಿ. ಪರಮೇಶ್ವರ್

ದಲಿತ ಸಿಎಂ ಚರ್ಚೆ ಮುನ್ನಲೆಗೆ ಬರಲು ನಾನೇ ಕಾರಣ ಎಂದ ಡಾ.ಜಿ. ಪರಮೇಶ್ವರ್

ಬೆಂಗಳೂರು, ನವೆಂಬರ್ 14, 2021 (www.justkannada.in): ನಾನು ಸಿಎಂ ಆಗಬಹುದು. ಆಗದೇ ಇರಬಹುದು. ಈ ಮಾತನಿಂದ ದಲಿತ ಸಿಎಂ ಬಗ್ಗೆ ಚರ್ಚೆ ಶುರುವಾಗಿದೆ ಎಂದು ಮಾಜಿ ಡಿಸಿಎಂ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.

ರಾಜ್ಯ ಕಾಂಗ್ರೆಸ್ ನಲ್ಲಿ ಮುಂದಿನ ಸಿಎಂ ಕುರಿತು ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಪರಮೇಶ್ವರ್ ಅವರು ದಲಿತ ಸಿಎಂ ಕುರಿತ ಈ ಹೇಳಿಕೆ ಮಹತ್ವದ ಪಡೆದುಕೊಂಡಿದೆ.

ತುಮಕೂರಿನಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಡಾ.ಜಿ.ಪರಮೇಶ್ವರ್, ರಾಹುಲ್ ಗಾಂಧಿ ನನಗೆ ಏನಾಗಬೇಕು ಎಂದು ಕೇಳಿದ್ದರು. ತಕ್ಷಣ ನಾನು ಸಿಎಂ ಆಗಬೇಕು ಎಂದು ಹೇಳಿದ್ದೆ ಎಂದು ತಿಳಿಸಿದ್ದಾರೆ.

ಈ ಮಾತನಿಂದ ದಲಿತ ಸಿಎಂ ಬಗ್ಗೆ ಚರ್ಚೆ ಶುರುವಾಗಿದೆ. ಮುಂದಿನ ದಿನಗಳಲ್ಲಿ ಅದೃಷ್ಟ ಯಾರಿಗೆ ಬರುತ್ತೆ ನೋಡಣ ಎಂದಿದ್ದಾರೆ.