ಪ್ರಿಯಾಂಕ್ ಖರ್ಗೆ ಹೆಸರು ಗಂಡೋ-ಹೆಣ್ಣೋ ಗೊತ್ತೇ ಆಗಲ್ಲ ?! ಸಂಸದ ಪ್ರತಾಪ್ ಸಿಂಹ ವ್ಯಂಗ್ಯ

ಮೈಸೂರು, ನವೆಂಬರ್ 14, 2021 (www.justkannada.in): ಪ್ರಿಯಾಂಕಾ ಖರ್ಗೆ ಹೆಸರು ಗಂಡೊ‌ಹೆಣ್ಣೋ ಗೊತ್ತೇ ಆಗಲ್ಲ ಎಂದು ವ್ಯಂಗ್ಯವಾಡಿದ್ದಾರೆ ಸಂಸದ ಪ್ರತಾಪ್ ಸಿಂಹ.

ಪೇಪರ್ ಟೈಗರ್ ಹೇಳಿಕೆಗೆ ಉತ್ತರ ಕೊಡಲ್ಲ ಎಂಬ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಮಾತನಾಡಿದ ಅವರು, ನಾನು ಪತ್ರಿಕೋದ್ಯಮದಿಂದ ಬಂದವನು, ನನ್ನನ್ನು ಪೇಪರ್ ಟೈಗರ್ ಎಂದರೆ ಬೇಜಾರಿಲ್ಲ. ಆದರೆ ಪ್ರಿಯಾಕ ಖರ್ಗೆ ರಾಜೀವ್ ಗಾಂಧಿ ಹೆಣ್ಣು ಮಗಳ ಹೆಸರಿಟ್ಟುಕೊಂಡಿದ್ದಾರೆ.
ಆದರೆ ಪ್ರಿಯಾಂಕ್ ಖರ್ಗೆಗೆ ಅವರ ಹೆಸರಿನಲ್ಲೇ ಸ್ವಂತಿಕೆ ಇಲ್ಲ. ಸ್ವಂತಿಕೆ ಇಲ್ಲದ ಮರಿ ಖರ್ಗೆ ಗೆಲುವಿಗಾಗಿ ಮಲ್ಲಿಕಾರ್ಜುನ ಖರ್ಗೆ ಅವರು ಸೋಲಿಲ್ಲದ ಸರದಾರ ಎಂಬ ಪಟ್ಟ ಕಳೆದುಕೊಂಡರು ಎಂದು ಟೀಕಿಸಿದರು.

ಕಾಂಗ್ರೆಸ್ ಪಕ್ಷ ಏನೆಲ್ಲಾ ಅಪಪ್ರಚಾರ ಮಾಡಿದರೂ ಮುಖ್ಯಮಂತ್ರಿ ಬದಲಾವಣೆ ಆಗುವುದಿಲ್ಲ. 2023ರ ಚುನಾವಣೆಯನ್ನು ನಾವು ಬಸವರಾಜ ಬೊಮ್ಮಾಯಿಯವರ ನೇತೃತ್ವದಲ್ಲೇ ಎದುರಿಸುತ್ತೇವೆ. ಈ ಮಾತನ್ನು ಕೇಂದ್ರ ಸಚಿವ ಅಮಿತ್ ಷಾ ಅವರು ಸಹ ಹೇಳಿದ್ದಾರೆ. ನಾವು ಬಸವರಾಜ ಬೊಮ್ಮಾಯಿಯವರ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತೇವೆ. ನೀವು ಯಾರ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತೀರಾ ಹೇಳಿ ಕಾಂಗ್ರೆಸ್ಸಿಗರೆ? ಸಿದ್ದರಾಮಯ್ಯ ನೇತೃತ್ವದಲ್ಲಿ ಎದುರಿಸುತ್ತೀರೋ ಅಥವಾ ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತೀರೋ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಕಾಂಗ್ರೆಸ್ ಪಕ್ಷದ ನಾಯಕರಿಗೆ ಸಂಸದ ಪ್ರತಾಪ್ ಸಿಂಹ ಪ್ರಶ್ನೆ ಮಾಡಿದರು.