Sunday, August 23, 2026

BDA Apartments

Home Front Page ಅಶಾಂತಿ ಉಂಟುಮಾಡಲಿಕ್ಕಾಗಿಯೇ ಪ್ರತಾಪ್ ಸಿಂಹನಂಥಹವರು ಹುಟ್ಟಿಕೊಂಡಿದ್ದಾರೆ: ಸಿದ್ದರಾಮಯ್ಯ ಆಕ್ರೋಶ

ಅಶಾಂತಿ ಉಂಟುಮಾಡಲಿಕ್ಕಾಗಿಯೇ ಪ್ರತಾಪ್ ಸಿಂಹನಂಥಹವರು ಹುಟ್ಟಿಕೊಂಡಿದ್ದಾರೆ: ಸಿದ್ದರಾಮಯ್ಯ ಆಕ್ರೋಶ

ಮೈಸೂರು, ನವೆಂಬರ್ 15, 2022 (www.justkannada.in): ಗುಂಬಜ್ ಮಾದರಿಯಲ್ಲಿ ನಿರ್ಮಾಣವಾಗಿರುವ ಬಸ್ ತಂಗುದಾನದ  ಕಟ್ಟಡಗಳನ್ನು ಹೊಡೆದು ಹಾಕುತ್ತೇನೆ ಎಂದಿರುವ ಸಂಸದ ಪ್ರತಾಪ್ ಸಿಂಹ  ಹೇಳಿಕೆಗೆ ಮೈಸೂರಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಸಮಾಜದಲ್ಲಿ ಅಶಾಂತಿ ಉಂಟುಮಾಡಲಿಕ್ಕೆ ಅಂಥ ಇಂಥವರು ಹುಟ್ಟಿಕೊಂಡಿದ್ದಾರೆ. ಹೊಡೆದು ಹಾಕೋಕೆ ಇವನ್ಯಾರು..? ಇವನ ದುಡ್ಡಲ್ಲಿ ಕಟ್ಟಿಸಿದ್ನಾ? ಅದು ಸಾರ್ವಜನಿಕರ ದುಡ್ಡಲ್ಲಿ ಕಟ್ಟಿಸಿರೋದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

600 ವರ್ಷಗಳ ಕಾಲ ದೇಶವನ್ನು ಮೊಗಲರು ಆಳಿದ್ರಲ್ಲ ಅವಾಗ ಇವರೆಲ್ಲಾ ಎಲ್ಲೋಗಿದ್ರು? ಪ್ರತಾಪ್ ಸಿಂಹ ಎರಡು ಬಾರಿ ಸಂಸದನಾಗಿದ್ದಾನೆ. ಆತನಿಗೆ ಕಾಮನ್ ಸೆನ್ಸ್ ಇಲ್ವಾ..? ಇಂಥಾ ವಿಚಾರಗಳನ್ನು ಇಟ್ಟುಕೊಂಡು ಜನರ ಮನಸ್ಸೆಳೆಯುವ ಪ್ರಯತ್ನ ಮಾಡ್ತಾರೆ. ಆದರೆ, ಜನ ಬುದ್ದಿವಂತರಿದ್ದಾರೆ. ಮುಂದಿನ ದಿನಗಳಲ್ಲಿ ಬಿಜೆಪಿಗೆ ಬುದ್ದಿ ಕಲಿಸುತ್ತಾರೆ ಎಂದು ಹೇಳಿದರು.