Monday, October 26, 2026

Dasara Wishes

ಇಂದು ದೆಹಲಿಗೆ ಸಿಎಂ ಸಿದ್ದರಾಮಯ್ಯ DasraWishes_JK DasraWishes JK
Happy Dasara
Home Front Page ಅಮೆಜಾನ್ ಉದ್ಯೋಗಿಗಳ ಕೆಲಸಕ್ಕೆ ಕುತ್ತು: ಸಾವಿರ ಸಿಬ್ಬಂದಿ ಕಡಿತ ಸಾಧ್ಯತೆ

ಅಮೆಜಾನ್ ಉದ್ಯೋಗಿಗಳ ಕೆಲಸಕ್ಕೆ ಕುತ್ತು: ಸಾವಿರ ಸಿಬ್ಬಂದಿ ಕಡಿತ ಸಾಧ್ಯತೆ

ಬೆಂಗಳೂರು. ನವೆಂಬರ್ 15, 2022 (www.justkannada.in): ಬೃಹತ್ ಇ ಕಾಮರ್ಸ್ ಅಮೆಜಾನ್ ತನ್ನ ಉದ್ಯೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡಲು ಮುಂದಾಗಿದೆ.

ಸಾಮಾಜಿಕ ಜಾಲತಾಣ ದೈತ್ಯ ಕಂಪನಿಗಳಲ್ಲಿ ಒಂದಾದ ಟ್ವಿಟರ್ ಉದ್ಯೋಗ ಕಡಿತ ಮಾಡಿದ ಬೆನ್ನಲ್ಲೇ  ಅಮೆಜಾನ್ ಉದ್ಯೋಗಿಗಳ ಸಂಖ್ಯೆಗೆ ಬ್ರೇಕ್ ಹಾಕಲು ನಿರ್ಧರಿಸಿದೆ.

ಸುಮಾರು 10 ಸಾವಿರ ಉದ್ಯೋಗ ಕಡಿತಕ್ಕೆ ಅಮೆಜಾನ್ ಮುಂದಾಗಿದೆ ಎಂಬ ಸುದ್ದಿ ಹೊರ ಬಿದ್ದಿದೆ. ಕಳೆದ ಕೆಲವು ತ್ರೈಮಾಸಿಕದಲ್ಲಿ ನಿರೀಕ್ಷಿತ ಲಾಭ ಬಾರದ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಲಾಗಿದೆ ಎನ್ನಲಾಗಿದೆ.

ಒಂದು ವೇಳೆ 10 ಸಾವಿರ ಉದ್ಯೋಗಗಳನ್ನು ಕಡಿತಗೊಳಿಸಿದ್ದಲ್ಲಿ ಅಮೆಜಾನ್​ ಇತಿಹಾಸದಲ್ಲೇ ಇದು ಬಹು ದೊಡ್ಡ ಉದ್ಯೋಗ ಕಡಿತವಾಗಲಿದೆ. ಉದ್ಯೋಗಿಗಳ ಬಲದ ಶೇ. 1ರಷ್ಟು ಪ್ರಮಾಣ ಇದಾಗಿದೆ.

ಅಂದಹಾಗೆ ವಿಶ್ವದಾದ್ಯಂತ ಸುಮಾರು 1.6 ಮಿಲಿಯನ್​ ಉದ್ಯೋಗಿಗಳು ಅಮೆಜಾನ್​ನಲ್ಲಿ ಕೆಲಸ ಮಾಡುತ್ತಿದ್ದಾರೆ.