ಅತಿ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಸಂಘಟನೆ ಸ್ಥಾಪನೆ: ಸಮಿತಿಯ ಪದಾಧಿಕಾರಿಗಳ ನೇಮಕ…

ಬೆಂಗಳೂರು,ಮಾರ್ಚ್,9,2021(www.justkannada.in): ಅತಿ ಹಿಂದುಳಿದ ವರ್ಗಗಳ ಹಿತರಕ್ಷಣೆ ಮಾಡುವ ನಿಟ್ಟಿನಲ್ಲಿ, ಅತಿ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಎಂಬ ಸಂಘಟನೆಯನ್ನು ಸ್ಥಾಪಿಸಿ, ಸಮಿತಿಯ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.jk

ಇಂದು ಬೆಂಗಳೂರಿನಲ್ಲಿ ಶಾಸಕರ ಭವನ (LH)ದ ಸಭಾ ಭವನದಲ್ಲಿ ಅತಿ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆಯ ಸಭೆ ನಡೆಯಿತು. ಈ ಸಭೆಯಲ್ಲಿ  ಅತಿ   ಹಿಂದುಳಿದ ವರ್ಗಗಳ  ಸ್ಥಿತಿ ಗತಿಗಳ ಬಗ್ಗೆ ಚರ್ಚಿಸಿ ಅತಿ ಹಿಂದುಳಿದ ವರ್ಗಗಳ ಹಿತರಕ್ಷಣೆ ಮಾಡುವ ನಿಟ್ಟಿನಲ್ಲಿ, ಅತಿ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಎಂಬ ಸಂಘಟನೆಯನ್ನು ಸ್ಥಾಪಿಸಿ, ಸಮಿತಿಯ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.Establishment - Organization - Most -Backward Classes Awareness- Forum- Appointment -Committee -Officers.

ಸಭೆಯಲ್ಲಿ  ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷ ಪ್ರೊ.ರವಿವರ್ಮ ಕುಮಾರ್ , ಪ್ರೊ.ದ್ವಾರಕಾನಾಥ್, ಮಾಜಿ ಸಭಾಪತಿ ವಿ. ಸುದರ್ಶನ್, ಮಾಜಿ ವಿದಾನಪರಿಷತ್ ಸಧಸ್ಯ ಎಂ.ಸಿ.ವೇಣುಗೋಪಾಲ್,  ಮಾಜಿ ವಿಧಾನಪರಿಷತ್ ಸಧಸ್ಯ ಡಾ.ಮುಖ್ಯಮಂತ್ರಿ ಚಂದ್ರು ,  ಮಾಜಿ ಶಾಸಕರಾದ ರಾಜಣ್ಣ,  ವಿಧಾನಪರಿಷತ್ ಸಧಸ್ಯರಾದ  ಪಿ.ಆರ್.ರಮೇಶ್,  ಮಾಜಿ ಶಾಸಕ ನೆಲ ನರೇಂದ್ರಬಾಬು, ಕರ್ನಾಟಕ ರಾಜ್ಯ ಮಡಿವಾಳರ ಸಂಘದ ರಾಜ್ಯಾಧ್ಯಕ್ಷರಾದ  ಸಿ.ನಂಜಪ್ಪ, ತಿಗಳ ಸಮಾಜದ ಅಧ್ಯಕ್ಷ ಸುಬ್ಬಣ್ಣ, ದೇವಾಂಗ ಸಮಾಜದ ಅಧ್ಯಕ್ಷ ರಮೇಶ್, ವಿಶ್ವಕರ್ಮ ಸಮಾಜದ ಶ್ರೀಧರ್ ಮತ್ತು ಗಂಗಾಧರ್, ಸವಿತಾ ಸಮಾಜದ ಪ್ರೊ.ನರಸಿಂಹಯ್ಯ, ಗಾಣಿಗ ಸಮಾಜದ  ಕೆ.ಆನಂದ್, ಮಡಿವಾಳ ಸಮಾಜದ ಜಿ.ಡಿ.ಗೋಪಾಲ್,  ಹೆಚ್.ಸಿ.ರುದ್ರಪ್ಪ,  ಎಂ.ಬಿ. ಬಸವರಾಜು, ಎಸ್.ಆರ್.ಯಲ್ಲಪ್ಪ, ಕುಂಬಾರ ಸಮಾಜದ  ನಟರಾಜ್ ಹಾಗೂ ಇನ್ನೂ ಅನೇಕ ಅತಿ ಹಿಂದುಳಿದ ವರ್ಗಗಳ ಮುಖಂಡರು ಭಾಗವಹಿಸಿದ್ದರು.

Key words: Establishment – Organization – Most -Backward Classes Awareness- Forum- Appointment -Committee -Officers.