ರಾಜ್ಯದಲ್ಲಿ 9 ಅಧಿಕಾರಿಗಳಿಗೆ ಸೇರಿದ್ದ 28 ಸ್ಥಳಗಳ ಮೇಲೆ ಏಕ ಕಾಲದಲ್ಲಿ ಎಸಿಬಿ ದಾಳಿ:  ದಾಖಲೆ ಪರಿಶೀಲನೆ…

ಬೆಂಗಳೂರು,ಮಾರ್ಚ್,9,2021(www.justkannada.in): ಅಕ್ರಮ ಆಸ್ತಿ ಗಳಿಸಿದ ಆರೋಪದ ಮೇಲೆ ಎಸಿಬಿ ಅಧಿಕಾರಿಗಳು ಬೆಳ್ಳಂಬೆಳಿಗ್ಗೆ ರಾಜ್ಯದ  9 ಅಧಿಕಾರಿಗಳಿಗೆ ಸೇರಿದ ರಾಜ್ಯದ 11 ಜಿಲ್ಲೆಗಳ 28 ಸ್ಥಳಗಳ ಮೇಲೆ ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ.jk

ಅಕ್ರಮ ಸಂಪತ್ತು ಹೊಂದಿದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಈ 9 ಅಧಿಕಾರಿಗಳ ಮನೆ, ಕಚೇರಿ ಮೇಲೆ ದಾಳಿ ನಡೆಸಲಾಗಿದೆ. ಮೈಸೂರಿನಲ್ಲಿ ಏಕ ಕಾಲದಲ್ಲಿ ಮೂರು  ಕಡೆ ಮೇಲೆ ಎಸಿಬಿ ದಾಳಿ ನಡೆಸಿದೆ. ಮೈಸೂರು ನಗರ ಯೋಜನೆ ಜಂಟಿ ನಿರ್ದೇಶಕ ಸುಬ್ರಮಣ್ಯ.ಕೆ.ವಡ್ಡರ್ ಕಚೇರಿ ಹಾಗೂ ಮನೆ ಮೇಲೆ  ಎಸಿಬಿ ಅದಿಕಾರಿಗಳು ದಾಳಿ ನಡೆಸಿದ್ದಾರೆ.

ಹಾಗೆಯೇ  ಚೆಸ್ಕಾಂ ಸೂಪರಿಂಟೆಂಡೆಂಟ್ ಇಂಜಿನಿಯರ್ ಮುನಿ ಗೋಪಾಲ್ ರಾಜು ಕಚೇರಿ ಹಾಗೂ ಎರಡು ಮನೆಗಳ ಮೇಲೆ ದಾಳಿ ನಡೆದಿದೆ. ಆರ್‌ಟಿಓ ಪಶ್ಚಿಮ ವಿಭಾಗದ ಎಫ್‌ಡಿಎ ಚೆನ್ನಪ್ಪ ಕಚೇರಿ ಮೇಲೂ ಎಸಿಬಿ ರೇಡ್ ಮಾಡಿದ್ದು ದಾಖಲೆ ಪರಿಶೀಲನೆ ನಡೆಸುತ್ತಿದೆ.ACB -raid - 28 locations - 9 officers - state.

ಮಂಡ್ಯದಲ್ಲಿ ಸಾರಿಗೆ ಇಲಾಖೆ ನೌಕರನ ಮನೆ ಮೇಲೆ ಎಸಿಬಿ ದಾಳಿ ನಡೆಸಿದೆ.  ಮಂಡ್ಯದ ಕುವೆಂಪು ನಗರ ಹಾಗೂ ಸ್ವಂತ ಗ್ರಾಮ ಆಲಕೆರೆ ನಿವಾಸದ ಮೇಲೆ ಏಕಕಾಲದಲ್ಲಿ ದಾಳಿಯಾಗಿದ್ದು, ಎಸಿಬಿ ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ. ಮೈಸೂರಿನ RTO ಕಚೇರಿಯಲ್ಲಿ FDAಆಗಿ ಕೆಲಸ ಮಾಡ್ತಿರುವ ವಿ‌.ಚನ್ನವೀರಪ್ಪ ಎಂಬುವವರ ಮನೆ ಮೇಲೆ ದಾಳಿಯಾಗಿದೆ. ಈ ಹಿಂದೆ ಸಾರಿಗೆ ಆಯುಕ್ತರ ಕಚೇರಿಯಲ್ಲಿ ಕೆಲಸ ಮಾಡ್ತಿದ್ದರು. ಅಕ್ರಮ ಆಸ್ತಿ ಗಳಿಕೆ ಮತ್ತು ಭ್ರಷ್ಟಾಚಾರದ ದೂರಿನ ಮೇಲೆ ದಾಳಿಯಾಗಿದ್ದು  ಪರಿಶೀಲನೆ ವೇಳೆ ಅಪಾರ ಪ್ರಮಾಣದ ನಗದು ಚಿನ್ನಾಭರಣ ಸೇರಿ ಭೂ ಮತ್ತು ನಿವೇಶನ ದಾಖಲೆ ವೇಳೆ ಪತ್ತೆಯಾಗಿದೆ. ಎಸಿಬಿ ಎಸ್ಪಿ ಅರುಣಾಂಗೋಸ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

ಚಿಕ್ಕಬಳ್ಳಾಪುರದ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಕೃಷ್ಣೇಗೌಡ ಅವರಿಗೆ ಸೇರಿದ ಕೋಲಾರ ಮತ್ತು ಚಿಕ್ಕಬಳ್ಳಾಪುರದ ಮನೆ, ಕಚೇರಿ, ಅವರ ಸಹೋದರನ ಕೋಲಾರದ ಮನೆಯ ಮೇಲೆ ಎಸಿಬಿ ದಾಳಿ ನಡೆಸಲಾಗಿದೆ.

ಯಾದಗಿರಿ ನಗರದ ಸಹರಾ ಕಾಲೋನಿಯಲ್ಲಿರುವ ಜೆಸ್ಕಾಮ್ ಲೆಕ್ಕಾಧಿಕಾರಿ ರಾಜು ಪತ್ತಾರ್ ಅವರ ನಿವಾಸದ ಮೇಲೆ ಎಸಿಬಿ ದಾಳಿ ನಡೆದಿದೆ.  ಬಿಬಿಎಂಪಿ ಯಲಹಂಕ ವಲಯದ ನಗರ ಯೋಜನೆಗಳ ಕಿರಿಯ ಎಂಜಿನಿಯರ್ ಕೆ.ಸುಬ್ರಮಣ್ಯಂ, ದಾವಣಗೆರೆ ವಿಭಾಗದ ಫ್ಯಾಕ್ಟರೀಸ್ ಮತ್ತು ಬಾಯ್ಲರ್‌ನ ಉಪನಿರ್ದೇಶಕ ಕೆ.ಎಂ. ಪ್ರಥಮ್ ಅವರ ಮನೆ ಮೇಲೂ ಎಸಿಬಿ ದಾಳಿಯಾಗಿದೆ.

ENGLISH SUMMARY….

Today ACB has conducted raids and search has started in 28 places against 9 officers in 11 districts related to disproportionate of assets by team of ACB officers and staff under the supervision of Range SPs.
Details are as below .

1. Krishnegowda. Project Director .Nirmitikendra .chikkaballapur.
Places of search a.AGO’S house in
kolar taluk and chikkaballapur, AGO’S office in chikkaballapur and AGO’S brother’s house in kolar taluk.
By team of officers and staff headed by SP. Central range , Kala Krishnamurthy .IPS.

2.Hanamantha shivappa chikkannanavara .Deputy chief lectrical inspector, ,Belagavi circle.
Places of search AGO’S flat at channammanagar ,angola, Belagavi. AGO’S office at Belagavi circle, AGO’S native place in golambhavi village , jamakhandi taluk and GOs another flat in shanthinatha Homes apartment, kitturrani chennammanagar ,belgavi.

By team of officers and staff headed by SP. Northern range , Sri. Nemagowda .KSPS.

3.Subramanya K vaddar .Joint director . town and country planning .Mysore.
Paces of search AGO’S residence at Udupi ,AGO’S mother’s house at karwar town , AGO’S rented house at Mysore and AGO’S office.
By team of officers and staff headed by SP. Southern range, Sri. Bopaiah. KSPS

4.Munigopal Raju.superintendent Engineer ,CHESCOM, mysuru,
Places of search superintendent engineer office ,chesccom,kuvempunagar mysore. AGO’S residence at Gokulum Mysore and AGO’S native place at Kankpura town , Ramnagar.
By team of officers and staff headed by SP. Southern range, Sri. Arunangshu Giri .IPS.

5. Channaveerappa, FDA in RTO office , Mysore south, Lakshmipurum,
Places of search AGO’S residence at kuvempunagar mandya and AGO’S native place at Halakere village ,Mandya and AGO’S office .RTO office lakshmipurum, mysore.
By team of officers and staff headed by SP. Southern range, Sri. Arunangshu Giri .IPS.

6. Raju pattar,Account officer , GESCOM,Yadgir
Places of search AGO’S residence at Yadgir and AGO’S office at yadgir .
By team of officers and staff headed by SP. North Eastern range , Sri. Mahesh Meghannanavar .KSPS.

7. Victor simon .Police Inspector.BMTF.
Places of search AGO’S residence at Kasavanahalli Bangalore and AGO fathers and father in law houses at Mysuru and BMTF office at Bengaluru.
By team of officers and staff headed by SP. Bengaluru City Division, Sri. Kuldeep Kumar R. Jain.IPS.

8. K Subramanyam, Junior Engineer, Asst. Director Town Planning Office, BBMP, Yelahanka Zone, Bengaluru City.
Places of search AGO’S residence at Sahakaranagara Bangalore and Town Planning office at Yelahanka, Bengaluru.
By team of officers and staff headed by SP. Bengaluru City Division, Sri. Kuldeep Kumar R. Jain.IPS.

9. K M Pratham .Deputy Director ,Factories and Boilers ,Davangere Division.
Places of search AGO’S residence at nagashetti halli ,sanjay nagar, Banglore , AGO’S brother’s house at sanjay nagar and AGO’S office at Davangere .
By team of officers and staff headed by SP. Eastern Range, Sri. Jaiprakash. KSPS.

Key words: ACB -raid – 28 locations – 9 officers – state.