ಇಂದಿನಿಂದ 10 ದಿನಗಳ ಕಾಲ ಎಸ್ಕಾಂ ಆನ್ ಲೈನ್ ಸೇವೆ ಸ್ಥಗಿತ.

ಬೆಂಗಳೂರು,ಮಾರ್ಚ್,10,2024(www.justkannada.in): ಇಂದಿನಿಂದ 10 ದಿನಗಳ ಕಾಲ ಎಸ್ಕಾಂ ಆನ್ ಲೈನ್ ಸೇವೆ ಸ್ಥಗಿತಗೊಳ್ಳಲಿದೆ.

ಇಂಧನ ಇಲಾಖೆಯ ವೆಬ್ ಸೈಟ್ ಸಾಫ್ಟ್ ವೇರ್ ಅಪ್ ಡೇಟ್ ಮಾಡುವ  ಕಾರಣದಿಂದಾಗಿ ಇಂದಿನಿಂದ 10 ದಿನಗಳ ಕಾಲ ಆನ್ ಲೈನ್ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಬಿಲ್ ಸೇರಿದಂತೆ ಇತರೆ ಸೇವೆಗಳು ಸ್ಥಗತಗೊಳ್ಳಲಿದೆ.

ಈ ಕುರಿತು ಇಂಧನ ಇಲಾಖೆಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ರಾಜ್ಯದ ಎಲ್ಲಾ ಎಸ್ಕಾಂಗಳ ಆನ್ ಲೈನ್ ಸೇವೆಗಳು ಹತ್ತು ದಿನಗಳ ಕಾಲ ಸೇವೆಗಳು ಲಭ್ಯವಿರುವುದಿಲ್ಲ. ಮಾರ್ಚ್ 19ರವರೆಗೆ ಹತ್ತು ದಿನಗಳ ಕಾಲ ಲಭ್ಯವಿರುವುದಿಲ್ಲ ಎಂದು ತಿಳಿಸಿದೆ.

Key words: Escom- online- service -10 days