ಕ್ರಿಕೆಟ್: ಇಂಗ್ಲೆಂಡ್-ಆಸಿಸ್ ‘ಆ್ಯಶಸ್’ ಹೋರಾಟ ಶುರು !

ಬರ್ಮಿಂಗ್‌ಹ್ಯಾಮ್, ಆಗಸ್ಟ್ 01, 2019 (www.justkannada.in): ಆತಿಥೇಯ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯದ ನಡುವೆ ಪ್ರತಿಷ್ಠಿತ ಆ್ಯಶಸ್ ಟೆಸ್ಟ್ ಸರಣಿ ಆರಂಭವಾಗಿದೆ.

18 ತಿಂಗಳ ಹಿಂದೆ ಆಸ್ಟ್ರೇಲಿಯಕ್ಕೆ ಬಿಟ್ಟುಕೊಟ್ಟಿದ್ದ ಆ್ಯಶಸ್ ಕಪ್‌ನ್ನು ಮತ್ತೆ ವಶಪಡಿಸಿಕೊಳ್ಳಲು ಆಂಗ್ಲರ ಪಡೆ ಎದುರು ನೋಡುತ್ತಿದೆ.

ಕಳೆದ ತಿಂಗಳು ‘ಕ್ರಿಕೆಟ್ ಕಾಶಿ’ ಖ್ಯಾತಿಯ ಲಾರ್ಡ್ಸ್‌ಕ್ರೀಡಾಂಗಣದಲ್ಲಿ ಮೊತ್ತ ಮೊದಲ ಬಾರಿ ವಿಶ್ವಕಪ್ ಜಯಿಸಿದ್ದ ಇಂಗ್ಲೆಂಡ್ 2001ರಿಂದ ಸ್ವದೇಶದಲ್ಲಿ ನಡೆದಿರುವ ಯಾವ ಆ್ಯಶಸ್ ಸರಣಿಯನ್ನ್ನೂ ಸೋತಿಲ್ಲ.

ಉಭಯ ತಂಡಗಳು ಬಲಿಷ್ಠ ಬೌಲಿಂಗ್ ದಾಳಿ ಹಾಗೂ ಬ್ಯಾಟಿಂಗ್ ಸರದಿಯನ್ನು ಹೊಂದಿದ್ದು, ಸಮಬಲದ ಪೈಪೋಟಿ ನಿರೀಕ್ಷಿಸಲಾಗುತ್ತಿದೆ.