ಕ್ರಿಕೆಟ್: ಟೀಂ ಇಂಡಿಯಾ ಕೋಚ್ ಹುದ್ದೆ ರೇಸ್’ನಲ್ಲಿ ಜಯವರ್ಧನೆ, ಟಾಮ್ ಮೂಡಿ

ನವದೆಹಲಿ, ಆಗಸ್ಟ್ 01, 2019 (www.justkannada.in): ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ ಅವರಿಗೆ ಮತ್ತೊಂದು ಅವಕಾಶ ನೀಡುವ ಬಗ್ಗೆ ನಾಯಕ ವಿರಾಟ್‌ ಕೊಹ್ಲಿ ಒಲವು ತೋರಿದ್ದಾರೆ.

ಆದರೆ ಭಾರತ ಕ್ರಿಕೆಟ್‌ ತಂಡದ ಕೋಚ್‌ ಹುದ್ದೆಗೆ ಆಸ್ಟ್ರೇಲಿಯಾದ ಅನುಭವಿ ತರಬೇತುದಾರ ಟಾಮ್‌ ಮೂಡಿ ಒಳಗೊಂಡಂತೆ ಕೆಲವು ಅಂತರರಾಷ್ಟ್ರೀಯ ಮಾಜಿ ಆಟಗಾರರೂ ಅರ್ಜಿ ಸಲ್ಲಿಸಿದ್ದಾರೆ.

ಮೂಡಿ ಜೊತೆ, ನ್ಯೂಜಿಲೆಂಡ್‌ನ ಮಾಜಿ ಕೋಚ್‌ ಮೈಕ್‌ ಹೆಸ್ಸೊನ್‌, ಶ್ರೀಲಂಕಾದ ಮಾಜಿ ಆಟಗಾರ ಮಹೇಲ ಜಯವರ್ಧನೆ, ಭಾರತ ತಂಡದ ಮಾಜಿ ಆಲ್‌ರೌಂಡರ್‌ ರಾಬಿನ್‌ ಸಿಂಗ್‌, ಜಿಂಬಾಬ್ವೆ ತಂಡದ ಕೋಚ್‌ ಲಾಲ್‌ಚಂದ್‌ ರಜಪೂತ್‌ ಅರ್ಜಿ ಸಲ್ಲಿಸಿದ್ದಾರೆ.