ಕುಡಿದ ಅಮಲಿನಲ್ಲಿ ತನಗೆ ಕಚ್ಚಿ ಹಾವನ್ನು ಹಿಡಿದು ಕಚ್ಚಿ ಮೂರು ತುಂಡುಗಳನ್ನಾಗಿ ಮಾಡಿದ ಭೂಪ: ಆಸ್ಪತ್ರೆಗೆ ದಾಖಲು

ಇಟಾ:ಆ-1:(www.justkannada.in) ಕಂಠಪೂರ್ತಿ ಕುಡಿದ ವ್ಯಕ್ತಿಯೊಬ್ಬ ತನಗೆ ಕಚ್ಚಿದ ಹಾವನ್ನು ಕಚ್ಚಿ ತುಂಡು ತುಂಡುಗಳನ್ನಾಗಿ ಮಾಡಿ ಸಾಯಿಸಿ, ಆಸ್ಪತ್ರೆಗೆ ದಾಖಲಾಗಿರುವ ವಿಲಕ್ಶಣ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಉತ್ತರಪ್ರದೇಶದ ಇಟಾದ ಅಸ್ರೌಲಿ ಗ್ರಾಮದಲ್ಲಿ ಮದ್ಯ ಸೇವಿಸಿ ಮಾಡಿಕೊಂದ ಅವಾಂತರವಿದು. ಕಂಠಪೂರ್ತಿ ಕುಡಿದ ರಾಜ್​ಕುಮಾರ್​ ಎಂಬಾತನಿಗೆ ಹಾವೊಂದು ಕಚ್ಚಿದೆ. ಆದರೆ ಆತ ಅದಕ್ಕೆ ಔಷಧಿ ತೆಗೆದುಕೊಳ್ಳುವ ಮೊದಲು ಆ ಹಾವನ್ನು ಹಿಡಿದು ಕಚ್ಚಿದ್ದಾನೆ. ಅಷ್ಟಕ್ಕೇ ಸುಮ್ಮನಾಗದೆ ಅದನ್ನು ಬಾಯಲ್ಲೇ ಕಚ್ಚಿ ಮೂರು ತುಂಡುಗಳನ್ನಾಗಿ ಮಾಡಿದ್ದಾನೆ. ಹಾವು ಸಾವನ್ನಪ್ಪಿದೆ. ಹಾವು ಕಚ್ಚಿದ್ದರಿಂದ ವಿಷವೇರಿದ ರಾಜ್​ಕುಮಾರ್ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಬಗ್ಗೆ ರಾಜಕುಮಾರ್​ ತಂದೆ ಬಾಬು ರಾಮ್​ ಮಾಹಿತಿ ನೀಡಿದ್ದಾರೆ. ನನ್ನ ಮಗ ಮದ್ಯ ಸೇವನೆ ಮಾಡಿದ್ದ. ಹಾವು ನಮ್ಮ ಮನೆಗೆ ಹೊಕ್ಕು ಆತನಿಗೆ ಕಚ್ಚಿದೆ. ತಿರುಗಿ ಅದನ್ನು ಕಚ್ಚಿ ತುಂಡು ಮಾಡಿದ್ದಾನೆ. ಆತನಿಗೆ ಚಿಕಿತ್ಸೆ ಕೊಡಿಸಲು ಬೇಕಾದಷ್ಟು ಹಣ ನಮ್ಮಲ್ಲಿಲ್ಲ ಎಂದು ಹೇಳಿದ್ದಾರೆ.

ರಾಜ್ ಕುಮಾರ್ ಗೆ ಚಿಕಿತ್ಸೆ ನೀಡಿದ ವೈದ್ಯರೂ ಮಾಹಿತಿ ನೀಡಿದ್ದು, ರಾಜ್ ಕುಮಾರ್ ಸ್ಥಿತಿ ಗಂಭಿರವಾಗಿದ್ದು, ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿರುವುದಾಗಿ ತಿಳಿಸಿದ್ದಾರೆ.

ಕುಡಿದ ಅಮಲಿನಲ್ಲಿ ತನಗೆ ಕಚ್ಚಿ ಹಾವನ್ನು ಹಿಡಿದು ಕಚ್ಚಿ ಮೂರು ತುಂಡುಗಳನ್ನಾಗಿ ಮಾಡಿದ ಭೂಪ: ಆಸ್ಪತ್ರೆಗೆ ದಾಖಲು

Drunk Man In UP Bites Snake Into Pieces After It Bit Him