ಜನರು ಸಿಡಿದೇಳುವ ಮುನ್ನ ಗ್ಯಾರಂಟಿಗಳನ್ನ ಜಾರಿ ಮಾಡಿ- ಸರ್ಕಾರದ ವಿರುದ್ಧ ಮಾಜಿ ಶಾಸಕ ಸಿ.ಟಿ ರವಿ ಕಿಡಿ

ಚಿಕ್ಕಮಗಳೂರು,ಮೇ,29,2023(www.justkannada.in): ಗ್ಯಾರಂಟಿ ಯೋಜನೆ ಜಾರಿ ವಿಚಾರದಲ್ಲಿ ಕಾಂಗ್ರೆಸ್ ನವರು ನೆಪಹುಡುಕುವ ಕೆಲಸ ಮಾಡುತ್ತಿದ್ದಾರೆ. ಜನರು ಸಿಡಿದೇಳುವ ಮುನ್ನ ಗ್ಯಾರಂಟಿಗಳನ್ನ ಜಾರಿ ಮಾಡಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಕಿಡಿಕಾರಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಶಾಸಕ ಸಿ.ಟಿ ರವಿ,  ಚುನಾವಣೆ ಮೊದಲು ಎಲ್ಲರಿಗೂ ಉಚಿತ ಎಂದು ಹೇಳಿದ್ದರು. ಸಿಎಂ ಸಿದ್ಧರಾಮಯ್ಯ ನನಗೂ ಫ್ರಿ ನಿಮಗೂ ಪ್ರೀ ಎಂದಿದ್ರು.  ಈಗ ಎಲ್ಲರಿಗೂ ಕೊಡೋಕೆ ಆಗುತ್ತಾ ಎನ್ನುತ್ತಿದ್ದಾರೆ.  ಈಗ ಮನೆ ಮನೆಗೆ ಹಂಚಿದವರಿಗೆಲ್ಲಾ ಕೊಡಕಾಗುತ್ತಾ ಎನ್ನುತ್ತಿದ್ದಾರೆ.  ರಾಹುಕಾಲ ನೋಡಲ್ಲ ಅಂದ್ಮೇಲೆ ಜಾರಿ ಮಾಡಿ. ಈಗ ಯಾಕೆ ನೆಪ ಹೇಳಿಕೊಂಡು ಓಡಾಡುತ್ತಿದ್ದೀರಿ ಎಂದು ವಾಗ್ದಾಳಿ ನಡೆಸಿದರು.

ಮೋದಿ ಹೇಳಿದ್ರಲ್ಲ 15 ಲಕ್ಷ ಖಾತೆಗೆ ಹಾಕಲಿ ಎಂದು ಟಾಂಗ್ ನೀಡಿದ್ದ ಡಿಸಿಎಂ ಡಿ.ಕೆ ಶಿವಕುಮಾರ್ ಗೆ ತಿರುಗೇಟು ನೀಡಿದ ಸಿ.ಟಿ ರವಿ, ಪ್ರಧಾನಿ ಮೋದಿ 15 ಲಕ್ಷ ಕೊಡುತ್ತೇವೆ ಎಂದು ಹೇಳಿರಲಿಲ್ಲ ಸ್ವೀಸ್ ಬ್ಯಾಂಕ್ ನಲ್ಲಿರುವ ಹಣ ಭಾರತಕ್ಕೆ ಬಂದರೆ. ಆ ಹಣವನ್ನ ಖಾತೆಗೆ ಹಾಕುತ್ತೇವೆ ಎಂದಿದ್ದರು.   ಡಿಕೆಶಿಗೆ ಜಾಣಮರೆವು ಇರಬಹುದು ಎಂದು ಹರಿಹಾಯ್ದರು.

Key words: Enforce -guarantees –before- people- erupt – former MLA- CT Ravi