ರಾಜವೀರ ಮದಕರಿನಾಯಕನಿಗೆ ನಯನತಾರ ನಾಯಕಿ ಆಗ್ತಾರಾ?

ಬೆಂಗಳೂರು, ಮಾರ್ಚ್ 12, ಮಾರ್ಚ್ 2020 (www.justkannada.in): ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಜವೀರ ಮದಕರಿನಾಯಕ ಚಿತ್ರಕ್ಕೆ ಬಹುಭಾಷಾ ತಾರೆ ನಯನತಾರ ನಾಯಕಿಯಾಗಲಿದ್ದಾರೆ.

ಆದರೆ ಈ ಕುರಿತು ನಿರ್ದೇಶಕ ರಾಜೇಂದ್ರಸಿಂಗ್ ‌ ಬಾಬು ಯಾವುದೇ ಗುಟ್ಟು ಬಿಟ್ಟುಕೊಡುತ್ತಿಲ್ಲ. ಈ ಹಿಂದೆ ರಿಯಲ್ ಸ್ಟಾರ್ ಉಪೇಂದ್ರ ಅವರ ಜೊತೆ ನಾಯಕಿಯಾಗಿ ಸೂಪರ್ ಚಿತ್ರದಲ್ಲಿ ನಯನತಾರ ನಟಿಸಿದ್ದರು.

ಈಗ ಮತ್ತೆ ದರ್ಶನ್’​ ಗೆ ಜೋಡಿಯಾಗಿ ಕನ್ನಡಕ್ಕೆ ನಯನತಾರಾ ಕಮ್ ಬ್ಯಾಕ್ ಆಗಲಿದ್ದಾರೆ ಎನ್ನಲಾಗಿದೆ. ಸದ್ಯ ಚಿತ್ರದ ಮೊದಲ ಹಂತದ ಚಿತ್ರೀಕರಣ ಹೈದರಾಬಾದ್ ​ ನಲ್ಲಿ ಮುಕ್ತಾಯವಾಗಿದ್ದು 2 ನೇ ಹಂತದ ಚಿತ್ರೀಕರಣ ಶುರುವಾಗಲಿದೆ.