ನಾಡಿದ್ದು ಐಪಿಎಲ್ ಭವಿಷ್ಯ ನಿರ್ಧಾರ ಸಾಧ್ಯತೆ !

ಬೆಂಗಳೂರು, ಮಾರ್ಚ್ 12, ಮಾರ್ಚ್ 2020 (www.justkannada.in): ವಿಶ್ವದ ಅತಿ ದೊಡ್ಡ ಕ್ರಿಕೆಟ್ ಲೀಗ್ ಐಪಿಎಲ್ ಗೆ ಕರೋನಾ ಕರಿನೆರಳು ಆವರಿಸಿದೆ.

ಐಪಿಎಲ್ ಪಂದ್ಯಗಳನ್ನು ಆಯೋಜಿಸದಿರಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ. ಇದಾದ್ಮೇಲೆ ಮಹಾರಾಷ್ಟ್ರ ಸರ್ಕಾರ ಐಪಿಎಲ್ ಮೊದಲ ಪಂದ್ಯದ ಟಿಕೆಟ್ ವಿತರಣೆ ರದ್ದು ಮಾಡಿತ್ತು.

ಆದ್ರೆ ಈ ಬಗ್ಗೆ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ.ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಐಪಿಎಲ್ ಆಡಳಿತ ಮಂಡಳಿ ಮಾರ್ಚ್ 14ರಂದು ಸಭೆ ನಡೆಸಲು ನಿರ್ಧರಿಸಿದೆ.

ಸಭೆಯಲ್ಲಿ ಐಪಿಎಲ್ ಪಂದ್ಯಗಳನ್ನು ರದ್ದು ಪಡೆಸಬೇಕಾ? ಬೇಡ್ವಾ ಎಂಬ ವಿಷ್ಯದ ಬಗ್ಗೆ ಚರ್ಚೆ ನಡೆಯಲಿದೆ. ಈ ವರ್ಷ ಬಿಸಿಸಿಐಗೆ ಐಪಿಎಲ್ ಕಠಿಣವಾಗುತ್ತಿದೆ. ಐಪಿಎಲ್ ಆಡಲು ಭಾರತಕ್ಕೆ ಬರುವ 60 ವಿದೇಶಿ ಆಟಗಾರರಿಗೆ ವೀಸಾ ಸಿಗುತ್ತದೆಯೋ ಇಲ್ಲವೋ ಎಂಬ ಬಗ್ಗೆ ಇನ್ನೂ ಸ್ಪಷ್ಟ ನಿರ್ಧಾರ ಹೊರಬಂದಿಲ್ಲ.