ಮೇಯರ್ ಚುನಾವಣೆ ಹಿನ್ನೆಲೆ : ಮತದಾರರ ಪಟ್ಟಿಯಿಂದ ಐವರು ಅನರ್ಹ ಶಾಸಕರ ಹೆಸರು ತೆಗೆದ ಬಿಬಿಎಂಪಿ…

ಬೆಂಗಳೂರು,ಆ,29,2019(www.justkannada.in):  ಐವರು ಅನರ್ಹ ಶಾಸಕರಿಗೆ ಬಿಬಿಎಂಪಿ ಶಾಕ್ ನೀಡಿದೆ. ಮುಂದಿನ ತಿಂಗಳು ಮೇಯರ್ ಚುನಾವಣೆ ಹಿನ್ನೆಲೆ ಮತದಾರರ ಪಟ್ಟಿಯಿಂದ ಐವರು ಅನರ್ಹ ಶಾಸಕರ ಹೆಸರನ್ನ ಬಿಬಿಎಂಪಿ ತೆಗೆದು ಹಾಕಿದೆ.

ಅನರ್ಹ ಶಾಸಕರಾದ ಭೈರತಿ ಬಸವರಾಜ್, ಮುನಿರತ್ನ, ಎಸ್.ಟಿ ಸೋಮಶೇಖರ್, ಗೋಪಾಲಯ್ಯ, ರೋಷನ್ ಬೇಗ್ ಅವರ ಹೆಸರನ್ನ ಬಿಬಿಎಂಪಿ ಮತದಾರರ ಪಟ್ಟಿಯಿಂದ ತೆಗೆದು ಹಾಕಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ  ಮುಂಬರುವ ಬಿಬಿಎಂಪಿ ಮೇಯರ್ ಚುನಾವಣೆಯಲ್ಲಿ ಅನರ್ಹ ಶಾಸಕರು ಭಾಗವಹಿಸಲು ಅವಕಾಶವಿಲ್ಲ.

ಇನ್ನು ಬಿಬಿಎಂಪಿ ಮತದಾರರ ಪಟ್ಟಿಯನ್ನು ಪರಿಷ್ಕರಣೆ ಮಾಡಲಾಗಿದ್ದು,  ಈ ಮತದಾರರ ಪಟ್ಟಿಯಿಂದ ಅನರ್ಹಗೊಂಡ ಐವರು ಶಾಸಕರ ಹೆಸರನ್ನು ಕೈಬಿಡಲಾಗಿದೆ. ಜತೆಗೆ ಲೋಕಸಭೆಗೆ ಆಯ್ಕೆಯಾಗಿರುವ ನೂತನ ಸಂಸದರ ಹೆಸರನ್ನ ಮತದಾರರ ಪಟ್ಟಿಗೆ ಸೇರಿಸಲಾಗಿದೆ. ಪರಿಷ್ಕೃತ ಮತದಾರರ ಪಟ್ಟಿಯನ್ನು ಪ್ರಾದೇಶಿಕ ಚುನಾವಣಾ ಆಯುಕ್ತರಿಗೆ ರವಾನಿಸಲಾಗಿದೆ.

ಈಗಾಗಲೇ ತಮ್ಮ ಅನರ್ಹತೆ ನಿರ್ಧಾರದ ವಿರುದ್ಧ ಕಾನೂನು ಸಮರ ಸಾರಿರುವ ಶಾಸಕರಿಗೆ ಮತ್ತೊಂದು ಆಘಾತ ಎದುರಾಗಿದೆ. ಶಾಸಕಸ್ಥಾನದಿಂದ ಅನರ್ಹಗೊಳಿಸಿರುವ ಸ್ಪೀಕರ್ ಆದೇಶ ಪ್ರಶ್ನಿಸಿ ಅನರ್ಹ ಶಾಸಕರು ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯ ತುರ್ತು ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಒಪ್ಪಿದೆ.

 

Key words: election – BBMP -mayor  -five disqualified MLAs- voter list.